»   » ಉಮಾಶ್ರೀಗೆ ಕುವೆಂಪು ಮತ್ತು ಕಾರಂತರ ಪುಸ್ತಕ ಓದೋದು ಇಷ್ಟವಂತೆ.

ಉಮಾಶ್ರೀಗೆ ಕುವೆಂಪು ಮತ್ತು ಕಾರಂತರ ಪುಸ್ತಕ ಓದೋದು ಇಷ್ಟವಂತೆ.

Posted By: Staff
Subscribe to Filmibeat Kannada

ನಿಮ್ಜತೆ ಮಾತಾಡ್ಲಿಕ್ಕೂ ಪುರುಸೊತ್ತಿಲ್ಲರೀ... ಟೈಂ ಇದ್ದರೆ ತಾನೇ ಪಾಸ್‌ ಮಾಡುವುದು....ಎಂದು ರೇಗುತ್ತಲೇ ಮಾತಿಗೆ ಶುರುವಿಟ್ಟರು ಶಾಸಕಿ ಕಂ ಕಲಾವಿದೆ ಉಮಾಶ್ರೀ.

ಸಿನಿಮಾ, ನಾಟಕ, ರಂಗಭೂಮಿಯ ಸಂಬಂಧವುಳ್ಳವರೊಂದಿಗೆ ದಯವಿಟ್ಟು ನೀವು ಟೈಂಪಾಸ್‌ ಕುರಿತು ಪ್ರಶ್ನೆ ಕೇಳಬೇಡಿ. ಬೆಳಗ್ಗಿನಿಂದ ರಾತ್ರಿಯವರೆಗೆ ಪುರುಸೊತ್ತು ಅನ್ನುವುದೇ ಗೊತ್ತಿಲ್ಲದ ಜನ ನಾವು. ಊಟ ನಿದ್ದೆಗೂ ಸಮಯ ಹೊಂದಿಸಬೇಕಾದ ಪರಿಸ್ಥಿತಿ ನಮ್ಮದು. ಇವೆಲ್ಲದರ ಮಧ್ಯೆ ನಾನು ಶಾಸಕಿಯೂ ಆಗಿದೀನಿ ನೋಡಿ, ನನಗೆ ಹಲವಾರು ಜವಾಬ್ದಾರಿಗಳಿವೆ ಎಂದು ದಿನಚರಿ ಬಿಚ್ಚಿಟ್ಟರು ಉಮಾಶ್ರೀ.

ಹವ್ಯಾಸ, ಆಸಕ್ತಿ, ಗೀಳುಗಳ ಬಗ್ಗೆ ಒಂದಿಷ್ಟು ಹೇಳಿ ಎಂದರೆ ತಕ್ಷಣ ಏನೋ ಹೊಳೆದಂತೆ ಮುಗುಳ್ನಕ್ಕ ಉಮಕ್ಕ ಮತ್ತೆ ಮಾತು ಮುಂದುವರೆಸಿದರು. ' ಹೌದು. ಹವ್ಯಾಸಗಳು ಬದುಕಿನ ಭಾಗವೇ. ನನಗಂತೂ ಪುಸ್ತಕಗಳೆಂದರೆ ಪಂಚ ಪ್ರಾಣ. ಕುವೆಂಪು ಕಾರಂತರ ಪುಸ್ತಕಗಳನ್ನ ಓದುವುದೇ ಖುಷಿ. ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿಯನ್ನೇ ಈಗ ಮತ್ತೆ ಕೈಗೆತ್ತಿಕೊಂಡಿದ್ದೇನೆ. ಜತೆಗೆ ಸಂಗೀತದ ಬಗ್ಗೆಯೂ ಆಸಕ್ತಿಯಿದೆ. ಇಂತಹದ್ದೇ ಅಂತೇನಿಲ್ಲ. ಪಾಪ್‌, ರಾಕ್‌, ಹಿಂದೂಸ್ತಾನಿ, ಕರ್ನಾಟಿಕ್‌ ಎಲ್ಲವೂ ಪ್ರಿಯವೇ."

'ಅಡುಗೆ ಮಾಡುವುದು ಕೂಡ ನನ್ನ ಪ್ರಿಯ ಹವ್ಯಾಸ. ಅಂದಹಾಗೆ ಹವ್ಯಾಸದ ಪ್ರಶ್ನೆ ಎಲ್ಲಿಂದ ಬಂತು. ಅದು ಕೂಡ ಬದುಕಿನ ಅನಿವಾರ್ಯಗಳಲ್ಲೊಂದು ತಾನೇ ?" ಎಂದು ಎದ್ದು ಹೊರಟೇ ಬಿಟ್ಟರು.

English summary
Politician cum actress Umashree likes to read Kuvempu and Shivarama Karanths books
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada