»   » ದೇವ್‌ ಚಿತ್ರಕ್ಕೆ ಲತಾ ಇಂಗ್ಲಿಷ್‌ ಹಾಡು

ದೇವ್‌ ಚಿತ್ರಕ್ಕೆ ಲತಾ ಇಂಗ್ಲಿಷ್‌ ಹಾಡು

Subscribe to Filmibeat Kannada

ಪುಣೆ : ಚಿರ ನಾಯಕ ಎಂದು ಹೆಸರು ಮಾಡಿರುವ ದೇವಾನಂದ್‌ ‘ಸಾಂಗ್‌ ಆಫ್‌ ಲೈಫ್‌’ ಎಂಬ ಇಂಗ್ಲಿಷ್‌ ಸಿನಿಮಾ ತೆಗೆಯಲಿದ್ದು, ಅದರಲ್ಲಿ ಲತಾ ಮಂಗೇಶ್ಕರ್‌ ಕೈಲಿ ಇಂಗ್ಲಿಷ್‌ ಹಾಡು ಹಾಡಿಸುವ ಆಸೆ ಅವರದ್ದು.

ಪುಣೆಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾನುವಾರ (ಡಿ. 07) ಜೀವಮಾನದ ಸಾಧನೆ ಪ್ರಶಸ್ತಿ ಸ್ವೀಕರಿಸಿದ ನಂತರ ದೇವ್‌ ತಮ್ಮ ಆಸೆ ತೋಡಿಕೊಂಡರು. ಇದೇ ಪ್ರಶಸ್ತಿಗೆ ಭಾಜನರಾದ ಲತಾ ಕೂಡ ಪಕ್ಕದಲ್ಲಿ ನಿಂತಿದ್ದರು.

ಪುಣೆಯಲ್ಲಿ ಪ್ರಬಾತ್‌ ಸ್ಟುಡಿಯೋದಲ್ಲಿ ತಾವು ಕಷ್ಟ ಪಟ್ಟ ದಿನಗಳು, ಸೈಕಲ್‌ ತುಳಿದುಕೊಂಡು ಓಡಾಡುತ್ತಿದ್ದಾಗಿನ ಅನುಭವಗಳನ್ನು ದೇವಾನಂದ್‌ ತಮ್ಮದೇ ಮಾತಿನ ಖದರಿನಲ್ಲಿ ವರ್ಣಿಸಿದಾಗ ಅಭಿಮಾನಿಗಳಿಂದ ಜೋರು ಕರತಾಡನ.

ಸದ್ಯಕ್ಕೆ ಅವರು ತೆಗೆಯುತ್ತಿರುವ ಹಿಂದಿ ಚಿತ್ರ ‘ಬ್ಯೂಟಿ ಕ್ವೀನ್‌’ಗೆ ಒಬ್ಬ ಸುಂದರ ಹುಡುಗಿಯನ್ನು ಹುಡುಕುತ್ತಿದ್ದಾರೆ. ತಮ್ಮ ಈ ಹುಡುಕಾಟವನ್ನು ಬಿಚ್ಚಿಟ್ಟಾಗ, ಅನೇಕ ತರುಣಿಯರು ‘ನಾನಾಗಬಹುದೆ’ ಎಂದು ಎದ್ದು ನಿಂತಾಗ ಪ್ರೇಕ್ಷಕರ ಸಾಲುಗಳಲ್ಲಿ ನಗೆಯ ಹೊಳೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada