»   » ‘ಮಾಲ್ಗುಡಿ ಡೇಸ್‌’ಗೆ ಕವಿತಾ ಸಾರಥ್ಯ

‘ಮಾಲ್ಗುಡಿ ಡೇಸ್‌’ಗೆ ಕವಿತಾ ಸಾರಥ್ಯ

Posted By:
Subscribe to Filmibeat Kannada

ಕಿರುತೆರೆಯಲ್ಲಿ ಒಂದು ಕಾಲಕ್ಕೆ ಸಂಚಲನೆ ಹುಟ್ಟಿಸಿದ್ದ ಆರ್‌.ಕೆ.ನಾರಾಯಣ್‌ ಕೃತಿ ಆಧಾರಿತ ‘ಮಾಲ್ಗುಡಿ ಡೇಸ್‌’ ಧಾರಾವಾಹಿ ಮತ್ತೆ ಜೀವಗೊಳ್ಳಲಿದೆ. ಶಂಕರ್‌ ನಾಗ್‌ ಬಳಸದೆ ಉಳಿಸಿರುವ ಮಾಲ್ಗುಡಿ ದಿನಗಳನ್ನು ತೆರೆಗೆ ತರುವ ಜವಬ್ದಾರಿಯನ್ನು ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕಿ ಕವಿತಾ ಲಂಕೇಶ್‌ ಹೊತ್ತಿದ್ದಾರೆ.

ಮೊದಲ ಕಥೆ ಹಾವಿನ ಹಾಡು. ಇದರ ಪ್ರಮುಖ ಪಾತ್ರದಲ್ಲಿ ಕವಿತಾ ಅವರನ್ನು ಇಷ್ಟಪಡುವ ಅನಂತನಾಗ್‌ ಅಭಿನಯಿಸಿದ್ದಾರೆ. ತಾನೇ ಬುದ್ಧಿವಂತ ಅಂದುಕೊಂಡ ವ್ಯಕ್ತಿಯಾಬ್ಬ ಸಿಕ್ಕಾಪಟ್ಟೆ ಮಾತಾಡುವ ಪಾತ್ರ ಇದು. ಅನಂತ್‌ ತಮ್ಮ ಸೋದರ ಶಂಕರನ ಹಳೆಯ ದಿನಗಳನ್ನು ನೆನೆದರು. ಮಾಲ್ಗುಡಿ ಡೇಸ್‌ ಧಾರಾವಾಹಿಯ ಖದರನ್ನು ಕಾಪಿಟ್ಟ ಶಂಕರ್‌ ಕೈಚಳಕವನ್ನು ಮತ್ತೆ ಮತ್ತೆ ಕೊಂಡಾಡಿದರು. ಕವಿತಾ ಕೂಡ ಶಂಕರ್‌ ಮಾಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮುಂದುವರೆಸಿಕೊಂಡು ಹೋಗುತ್ತಾರೆಂಬ ಭರವಸೆಯ ಮಾತುಗಳನ್ನಾಡಿದರು.

ಅಂದಹಾಗೆ, ಮಾಲ್ಗುಡಿ ಡೇಸ್‌ ಹಿಂದಿನಂತೆ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಇದು ಹಿಂದಿ ಧಾರಾವಾಹಿ. ಇಂತಹ ಒಳ್ಳೆಯ ಅವಕಾಶ ಪಡೆಯುವ ಮೂಲಕ ಕವಿತಾ ಲಂಕೇಶ್‌ ಹಿಂದಿ ಧಾರಾವಾಹಿ ಲೋಕಕ್ಕೂ ಕಾಲಿಟ್ಟಂತಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada