ಬಸುರಿ ಐಶ್ವರ್ಯಗೆ ದೃಷ್ಟಿ ಬೊಟ್ಟು ಇಡಬೇಕು!

ವಸಂತಮಾಸಕ್ಕೆ ಹೂಬಿಡುವ ಸಂಭ್ರಮಕ್ಕೆ ಮರಗಳು ಮೈತುಂಬಿಕೊಳ್ಳುತ್ತವೆ. ಒಂದೆರಡು ಮಳೆಬಿದ್ದಾಗ ಪ್ರಕೃತಿ ಮೈತುಂಬಿ ಹಸಿರಿನಿಂದ ಕಂಗೊಳಿಸುತ್ತದೆ. ಇವೆಲ್ಲ ಪ್ರಕೃತಿ ಸಹಜ. ವಿಷ್ಯ ಏನಂದ್ರೆ ಸದ್ಯ ಆರು ತಿಂಗಳ ಗರ್ಭಿಣಿಯಾಗಿರುವ ಐಶ್ವರ್ಯ ರೈ ಸೌಂದರ್ಯ ಹಲವು ಪಟ್ಟು ಹೆಚ್ಚಾಗಿದೆಯಂತೆ!
ಮೊನ್ನೆ ಬ್ಯಾಂಕಾಕ್ ನಲ್ಲಿ ನಡೆದ ಸೌಂದರ್ಯ ಉತ್ಪನ್ನವೊಂದರ ಜಾಹೀರಾರಿಗೆ ಐಶ್ ಪೋಸ್ ನೀಡಿದ್ದರು. ಅಲ್ಲಿದ್ದವರು ಆಕೆಯ ಸೌಂದರ್ಯಕ್ಕೆ ಬೆರಗಾಗಿದ್ದರು. ಮೊದಲೇ ಆಕೆ ಸೌಂದರ್ಯದ ಪುತ್ತಳಿ. ಈಗ ಬಸುರಿ ಬೇರೆ. ಅಮ್ಮನಾಗೋ ಖುಷಿಯಲ್ಲಿ ಸಹಜವಾಗಿ ಆಕೆ ಮೈತುಂಬಿಸಿಕೊಂಡಿದ್ದಾಳೆ.
ಐಶ್ವರ್ಯ ಮೊದಲಿಗಿಂತ ಸುಂದರಿಯಾಗಿದ್ದಾರೆ ಎಂದು ಮೇಕಪ್ ಕಲಾಕರ ಮಿಕ್ಕಿ ಹೇಳಿದ್ದಾರೆ. ಇದನ್ನು ಆಕೆಯ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರ ಒಪ್ಪಿ "ಹೌದು ಹೌದು, ಮೊದಲಿಗಿಂತಲೂ ಬ್ಯೂಟಿಫುಲ್ ಆಗಿದ್ದಾರೆ" ಅಂತಾರೆ. ಇವರೆಲ್ಲ ಹೀಗನ್ನುತ್ತಿರುವಾಗ ಇವಳನ್ನು ಬಸುರಿ ಎಂಬ ಕಾರಣಕ್ಕೆ ಸಿನಿಮಾದಿಂದ ಕೈಬಿಟ್ಟ ಮಧು ಬಂಡಾರ್ಕರ್ ಪೆಚ್ಚಾಗಿದ್ದಾನಂತೆ.
ಮೊದಲು ಐಶುಗೆ ದೃಷ್ಟಿಬೊಟ್ಟು ಇಡಬೇಕು.


Click it and Unblock the Notifications











