ಹೊಸಪೇಟೆ: ಜೋಗಯ್ಯ ಅಭಿಮಾನಿಗಳ ಮೇಲೆ ಲಾಠಿಚಾರ್ಜ್

ಹೊಸಪೇಟೆಯ ಲಕ್ಷ್ಮಿ ಮತ್ತು ಮೀರ್ ಆಲಂ ಚಿತ್ರಮಂದಿರಗಳಲ್ಲಿ ಶಿವಣ್ಣರ ಯುವ ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದಾರೆ. ಗುರುವಾರ ರಾತ್ರಿಯೇ ಮೊದಲ ಪ್ರದರ್ಶನ ಏರ್ಪಡಿಸಲಾಗಿದೆ ಎಂಬ ಸುದ್ದಿಯ ಬೆನ್ನತ್ತಿ 5-6 ಸಾವಿರ ಅಭಿಮಾನಿಗಳು ಈ ಚಿತ್ರಮಂದಿರಗಳ ಬಳಿ ಜಮಾಯಿಸಿದ್ದರು. ಆದರೆ ಬೆಳಗಾವಿಯಿಂದ ಪ್ರಿಂಟ್ ಬರುವುದು ತಡವಾಗಿ ಪ್ರದರ್ಶನ ವಿಳಂವಾಗಲಿದೆ ಎಂದು ಟಾಕೀಸಿನವರು ಹೇಳಿದಾಗ ಅಭಿಮಾನಿಗಳು ರೊಚ್ಚಿಗೆದ್ದರು.
ಟಾಕೀಸುಗಳ ಮೇಲೆ ಬಾಟಲ್ ಮತ್ತು ಕಲ್ಲು ತೂರಾಟ ನಡೆಸಿ ಗಲಾಟೆ ಎಬ್ಬಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಭಿಮಾನಿಗಳ ಮೇಲೆ ಲಾಠಿಚಾರ್ಜ್ ನಡೆಸಿ, ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ. ಘಟನೆಯಲ್ಲಿ ಹತ್ತಾರು ಪೊಲೀಸರು ಮತ್ತು ಶಿವಣ್ಣ ಅಭಿಮಾನಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಡಿವೈಎಸ್ ಪಿ ಎಚ್. ಎಸ್. ಖೇರಿ ತಿಳಿಸಿದ್ದಾರೆ.
ಘಟನೆಯಲ್ಲಿ ಚಿತ್ರಮಂದಿರದ ಜಾಗುಗಳು ಪುಡಿಪುಡಿಯಾಗಿವೆ. ಆಸ್ತಿಪಾಸ್ತಿಗೆ ನಷ್ಟವುಂಟಾಗಿದೆ ಎಂದು ಎರಡೂ ಟಾಕೀಸುಗಳ ಮಾಲೀಕರು ದೂರು ನೀಡಿದ್ದು ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Click it and Unblock the Notifications











