»   » ಚೆನ್ನೈನಲ್ಲೂ ದೇಗುಲ ನಿರ್ಮಿಸಿದ ಅರ್ಜುನ್ ಸರ್ಜಾ

ಚೆನ್ನೈನಲ್ಲೂ ದೇಗುಲ ನಿರ್ಮಿಸಿದ ಅರ್ಜುನ್ ಸರ್ಜಾ

Posted By:
Subscribe to Filmibeat Kannada
ಕನ್ನಡ ಮೂಲದ ತಮಿಳು ಚಿತ್ರರಂಗದಲ್ಲಿ ಮಿಂಚಿರುವ ನಟ ಅರ್ಜುನ್ ಸರ್ಜಾ ಇತ್ತೀಚಿಗೆ ಕರ್ನಾಟಕದ ತುಮಕೂರಿನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸಿರುವ ವಿಷಯ ತುಂಬಾ ಮಂದಿಗೆ ತಿಳಿದಿದೆ. ಈಗ ಇದೇ ಮಾದರಿಯಲ್ಲಿ ಚೆನ್ನೈನ (Gerugambakkam) ಗೆರುಗಂಬಾಕಮ್ ನಲ್ಲೊಂದು ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ ಅರ್ಜುನ್ ಸರ್ಜಾ. ಈಗಾಗಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು ಬೃಹತ್ ಆಂಜನೇಯನ ವಿಗ್ರಹ ಸ್ಥಾಪಿಸಲಾಗಿದೆ.

ಚೆನ್ನೈನ ಈ ದೇಗುಲ ನಿರ್ಮಾಣದ ಶಿಲ್ಪಿ ಅಶೋಕ ಗುಡಿಗಾರ್. ಕಲ್ಲಿನ ಈ ಆಂಜನೇಯ ಸ್ವಾಮಿ ಶಿಲ್ಪಕ್ಕೊಂದು ಚೆಂದದ ರೂಪ ಕೊಟ್ಟಿರುವ ಅಶೋಕ್, ಅರ್ಜುನ್ ಸರ್ಜಾ ಕುಟುಂಬದ ಪ್ರೀತಿಗೆ ಪಾತ್ರರಾಗಿದ್ದಾರೆ. ಇತ್ತೀಚಿಗೆ ನಡೆದ ವಿಗ್ರಹ ಪ್ರತಿಷ್ಠಾಪನೆ ವೇಳೆ ಅರ್ಜುನಾ ಸರ್ಜಾ ಜೊತೆ ಅವರ ತಾರಾಪತ್ನಿ ಆಶಾರಾಣಿ ಕೂಡ ಹಾಜರಿದ್ದರು. ಭಕ್ತಿಯಿಂದ ಆಂಜನೇಯ ಸ್ವಾಮಿಗೆ ಅರ್ಜುನ್ ಸರ್ಜಾ ದಂಪತಿಗಳು ಪೂಜೆ ಸಲ್ಲಿಸಿದರು.

ಹುಟ್ಟಿದ ಮಣ್ಣಿನ ಋಣ ಮರೆಯದ ಅರ್ಜುನ್ ಸರ್ಜಾ ಕನ್ನಡ ನೆಲ ತುಮಕೂರಿನಲ್ಲಿ ದೇಗುಲ ನಿರ್ಮಿಸಿ ಕನ್ನಡಿಗರ ಅಭಿಮಾನಕ್ಕೆ ಪಾತ್ರವಾದರು. ಅದೇ ರೀತಿ ಅನ್ನಕೊಟ್ಟ ನೆಲ ತಮಿಳು ನಾಡಿನಲ್ಲೂ ಒಂದು ದೇಗುಲ ನಿರ್ಮಿಸುವ ಮೂಲಕ ಅಲ್ಲಿನ ಅನ್ನದ ಋಣಕ್ಕೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂಲಕ ವಿಭಿನ್ನತೆ ಮೆರೆಯುವದ ಜೊತೆಗೆ ಮಾದರಿ ಕೆಲಸ ಮಾಡಿದ್ದಾರೆ ಎನ್ನಬಹುದು. (ಒನ್ ಇಂಡಿಯಾ ಕನ್ನಡ)

English summary
A large size Anjaneya statue has established in the temple premises that built by actor Arjun today at Gerugambakkam, near Chennai. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada