ವಿಜಯಲಕ್ಷ್ಮಿಗೆ ಚಪ್ಪಲಿಯಲ್ಲಿ ಹೊಡೆದರೆ ದರ್ಶನ್

ದರ್ಶನ್ ತಮ್ಮ ನಡವಳಿಕೆಯನ್ನು ತಿದ್ದುಕೊಂಡರೆ ಮತ್ತೆ ಅವರೊಂದಿಗೆ ಸಂಸಾರ ಮಾಡುವ ಭರವಸೆಯನ್ನು ವಿಜಯಲಕ್ಷ್ಮಿ ನೀಡಿದ್ದಾರೆ. ಅವರು ಸಾಕಷ್ಟು ನೊಂದಿದ್ದಾರೆ. ಅವರ ತಲೆಯ ಮೇಲೆ ರಕ್ತ ಇನ್ನೂ ಹೆಪ್ಪುಗಟ್ಟಿತ್ತು. ದರ್ಶನ್ ಅವರು ಇನ್ನು ಮುಂದೆ ಯಾವುದೇ ಕಿರುಕುಳ ನೀಡಲ್ಲ ಎಂದು ಸ್ಪಷ್ಟ ಭರವಸೆ ನೀಡಿದರೆ ರಾಜಿಗೆ ಯತ್ನಿಸುತ್ತೇವೆ ಎಂದರು.
ವಿಜಯಲಕ್ಷ್ಮಿ ಅವರು ಸಾಕಷ್ಟು ನೊಂದಿದ್ದಾರೆ. ತಮ್ಮ ಚಪ್ಪಲಿಯಲ್ಲೆ ದರ್ಶನ್ ಹೊಡೆದರು ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ ಎಂದ ಅವರು, ತುಂಬ ನೊಂದಿರುವ ಅವರನ್ನು ಹೆಚ್ಚಿಗೆ ಪ್ರಶ್ನಿಸಲು ತಾವು ಬಯಸಲಿಲ್ಲ ಎಂದರು. ತಾಯಿ ಮತ್ತು ಮಗುವಿನ ರಕ್ಷಣೆಯನ್ನು ನಾವು ತೆಗೆದುಕೊಂಡಿದ್ದೇವೆ. ಈ ಘಟನೆಯಿಂದ ತಾವು ಕಳವಳಗೊಂಡಿದ್ದಾಗಿ ಮಂಜುಳಾ ಹೇಳಿದರು.
ಮದುವೆಯಾಗಿ ಎಂಟು ವರ್ಷಗಳಾಗಿವೆ. ಏಳು ವರ್ಷ ತಮ್ಮನ್ನು ತುಂಬ ಪ್ರೀತಿಯಿಂದ ನೋಡಿಕೊಂಡರು. ಕಳೆದ ಒಂದು ವರ್ಷದಿಂದ ಪತ್ನಿಗೆ ಭಾರಿ ಕಿರುಕುಳ ನೀಡಿದ್ದಾರೆ ದರ್ಶನ್. ಇನ್ನು ಮುಂದೆ ಹೀಗೆ ನಡೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದರೆ ರಾಜಿ ಮಾಡಿಕೊಳ್ಳುವುದಾಗಿ ವಿಜಯಲಕ್ಷ್ಮಿ ಹಾಗೂ ಅವರ ತಾಯಿ ಹೇಳಿದ್ದಾಗಿ ಮಂಜುಳಾ ತಿಳಿಸಿದರು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











