ಬಾಲಿವುಡ್ ಅಂಗಳಕ್ಕೆ ದಿಗಂತ್ ಜಿಗಿತ

ದಿಗಂತ್ ನಟಿಸಲಿರುವ ಬಾಲಿವುಡ್ ಚಿತ್ರದ ಕುಲಗೋತ್ರ ಇನ್ನು ಗೊತ್ತಾಗಿಲ್ಲ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು,ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ. ''ಈ ಚಿತ್ರ ನನ್ನ ಅದೃಷ್ಟದ ಬಾಗಿಲು ತೆಗೆದಿದೆ. ನನ್ನ ವೃತ್ತಿಜೀವನದಲ್ಲಿ ಹೊಸ ತಿರುವು ತರುತ್ತದೆ'' ಎಂದು ದಿಗಂತ್ ಬಲವಾಗಿ ನಂಬಿದ್ದಾರೆ.
'ಮುಂಗಾರು ಮಳೆ' ಹಾಗೂ 'ಗಾಳಿಪಟ' ಚಿತ್ರದಲ್ಲಿನ ದಿಗಂತ್ ನಟನೆ ಬಾಲಿವುಡ್ ನಿರ್ದೇಶಕರ ಗಮನ ಸೆಳೆದಿತ್ತಂತೆ.ಹಾಗಾಗಿ ಈ ಚಿತ್ರಕ್ಕೆ ದಿಗಂತ್ ಆಯ್ಕೆಯಾಗಿದ್ದಾರೆ. ಮುಂಗಾರು ಮಳೆ ಹಾಗೂ ಗಾಳಿಪಟ ಚಿತ್ರಗಳಲ್ಲಿ ಗಣೇಶ್ ಜೊತೆ ದಿಗಂತ್ ಸಹ ಮಿಂಚಿದ್ದರು. ದಿಗಂತ್ ಗೆ ಬಾಲಿವುಡ್ ನಲ್ಲೂ ಯಶಸ್ಸು ಸಿಗಲಿ ಎಂದು ಬೆನ್ನು ತಟ್ಟೋಣ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications