ಸಾಯಿ ಬಾಬಾ ಅಂದ್ರೆ ಐಂದ್ರಿತಾಗೆ ತುಂಬ ಇಷ್ಟ ಸ್ವಲ್ಪ ಕಷ್ಟ
ಒಬ್ಬೊಬ್ಬ ದೇವರಲ್ಲಿ ಒಬ್ಬೊಬ್ಬ ಸಿನಿಮಾ ತಾರೆಗೆ ನಂಬಿಕೆಯಿರುತ್ತದೆ. ಅದರಲ್ಲೂ ಸಾಯಿ ಬಾಬಾ ಭಕ್ತರ ಬಳಗ ದೊಡ್ದದು. ಸಾಕಷ್ಟು ಸಿನಿಮಾ ತಾರೆಗಳು ಸಾಯಿ ಬಾಬಾಗೆ ಮೊರೆಹೋಗಿ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ಚಿಗರೆ ಕಂಗಳ ಐಂದ್ರಿತಾ ರೇ ಅವರಿಗೂ ಶಿರಡಿ ಸಾಯಿ ಬಾಬಾ ಎಂದರೆ ಎಲ್ಲಿಲ್ಲದ ಭಕ್ತಿ ಉಕ್ಕಿ ಬರುತ್ತದಂತೆ.
ಆಕೆ ಗುರುವಾರ ಮಾತ್ರ ಸಾಯಿ ಬಾಬಾಗೆ ಪೂಜೆ ಮಾಡುವುದನ್ನು ಮರೆಯುವುದಿಲ್ಲವಂತೆ. ಸಮಯ ಸಿಕ್ಕರೆ ಶಿರಡಿಗೂ ಭೇಟಿ ನೀಡಿ ಸಾಯಿ ಬಾಬಾದರ್ಶನ ಮಾಡಿಕೊಂಡು ಬರುತ್ತಾರಂತೆ. ಹಾಗಂತ ಆಕೆಗೆ ಗಂಟೆಗಟ್ಟಲೆ ಪೂಜೆ ಮಾಡುವುದು, ಮಂತ್ರ ಪಠಿಸುವುದು ಇಷ್ಟವಿಲ್ಲವಂತೆ.
ದೇವಸ್ಥಾನಕ್ಕೆ ಹೋದಾಗ ಕೈಮುಗಿದು ಆತನಲ್ಲಿ ತನ್ನ ಕಷ್ಟ ಸುಖ ಹೇಳಿಕೊಳ್ಳುವುದು ಆಕೆಗೆ ಇಷ್ಟವಂತೆ.ಐಂದ್ರಿತಾ ಇತ್ತೀಚೆಗೆ ಭಾವಪರವಶರಾಗಿ ಸಾಯಿಬಾಬಾ ಬಗ್ಗೆ ಮಾತನಾಡಿದ್ದಾರೆ. ಅವರೇನಾದರೂ ಸಾಯಿಬಾಬಾ ಕುರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆಯೇ ಎಂದು ಕೇಳಿದರೆ ಹಾಗೇನಿಲ್ಲ ಎನ್ನುತ್ತಾರೆ.
More from Filmibeat
English summary
Kannada films charming actress Aindrita Ray says she is an ardent devotee of Shirdi Sai Baba. When she has a time definately she visits Shirdi. She was inspired to visit the temple because of her renewed interest in God. Also she says Sai Baba ismy God friend.
ಐಂದ್ರಿತಾ ರೇ ಶಿರಡಿ ಸಾಯಿಬಾಬಾ ದೇವರು ಧೂಳ್ ವೀರ ಪರಂಪರೆ aindrita ray shiradi sai baba dhool veera parampare


Click it and Unblock the Notifications











