ಭಾಗೀರಥಿಗೆ ಬಾಗಿನವಿಲ್ಲ; ಭಾವನಾಗೆ ಭಯಂಕರ ಕೋಪ
ಅಪ್ಪಟ ಕನ್ನಡದ ಪ್ರತಿಭೆ ನಟಿ ಭಾವನಾ ಕೋಪಗೊಂಡಿದ್ದಾರೆ. ಕಾರಣ ನಟಿ ವಿದ್ಯಾಬಾಲನ್ ಅವರಿಗೆ ಶ್ರೇಷ್ಠನಟಿ ಪ್ರಶಸ್ತಿ ಸಿಕ್ಕಿರುವುದು. ನಟಿ ವಿದ್ಯಾ ಬಾಲನ್, 59ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಠ ನಟಿ ಪಟ್ಟ ಗಿಟ್ಟಿಸಿದ್ದಾರೆ. ಇದರಿಂದ ಕನ್ನಡನಟಿ ಭಾವನಾ, ಕೆರಳಿ ಕೆಂಡವಾಗಿದ್ದಾರೆ. "ಯಾವ ದೃಷ್ಟಿಯಲ್ಲೂ ವಿದ್ಯಾ ಬಾಲನ್ ಶ್ರೇಷ್ಠ ನಟಿ ಪ್ರಶಸ್ತಿಗೆ ಅರ್ಹರಲ್ಲ" ಎಂದಿದ್ದಾರೆ ಭಾವನಾ. ಚಂದ್ರಮುಖಿ ಭಾವನಾ ಈಗ ಸೂರ್ಯನಂತೆ ಉರಿಯುವ ಚೆಂಡಾಗಿದ್ದಾರೆ.
ತಾನು ನಟಿಸಿದ 'ಭಾಗೀರಥಿ' ಆಯ್ಕೆಗಾರರ ಕಣ್ಣಿಗೆ ಬಿದ್ದಿಲ್ಲವೆನ್ನುವುದೇ ಆಕೆಯ ಬೇಸರಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುವಂತಿದೆ. ಭಾಗೀರಥಿ ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರವಾಗುತ್ತದೆ, ತನಗೆ ರಾಷ್ಟ್ರೀಯ ಪ್ರಶಸ್ತಿ ಗ್ಯಾರಂಟಿ ಅಂದುಕೊಂಡಿದ್ದಿರಬೇಕು ಭಾವನಾ. ಆದರೆ ಅದು 'ಡರ್ಟಿ' ವಿದ್ಯಾ ಪಾಲಾಗಿದೆ. ಇದರಿಂದ ಭಾವನಾ ಪಿತ್ತ ನೆತ್ತಿಗೇರಿದೆ.
"ನಟಿ ವಿದ್ಯಾ ಬಾಲನ್ 'ದಿ ಡರ್ಟಿ ಪಿಕ್ಚರ್' ನಲ್ಲಿ ಯಾವ ದೃಷ್ಟಿಯಿಂದಲೂ ಶ್ರೇಷ್ಠ ಅಭಿನಯ ನೀಡಿಲ್ಲ. ಹಾಗಾಗಿ ಆಕೆ ಈ ಪ್ರಶಸ್ತಿಗೆ ಅರ್ಹರಲ್ಲ. ಅಷ್ಟೇ ಅಲ್ಲ, ಅದು ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಪಾತ್ರವೂ ಅಲ್ಲ, ಅವರಿಗೆ ಶ್ರೇಷ್ಠನಟಿ ಪ್ರಶಸ್ತಿ ಘೋಷಣೆ ಮಾಡಿರುವುದು ನನಗೆ ಆಘಾತ ತಂದಿದೆ" ಎಂದು ಭಾವನಾ ತಮ್ಮ ಬೇಸರ ಹೊರಗೆಡವಿದ್ದಾರೆ. ಮುಂದಿನ ಪುಟ ನೋಡಿ...


Click it and Unblock the Notifications











