ಅಮೆರಿಕ ಅಮೆರಿಕ ಖ್ಯಾತಿಯ ಹೇಮಾ ಸೆಕೆಂಡ್ ಇನ್ನಿಂಗ್ಸ್
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕ ಅಮೆರಿಕ' ಚಿತ್ರದ ಮೂಲಕ ಮನೆಮಾತಾದ ನಟಿ ಹೇಮಾ ಪಂಚಮುಖಿ. ಒಂದೇ ಚಿತ್ರದಿಂದ ಖ್ಯಾತಿಯ ಉತ್ತುಂಗಕ್ಕೇರಿದ ಹೇಮಾ ಅವರು ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುವುದಾಗಿ ಹೇಳಿದ್ದಾರೆ.
ಆದರೆ ಅವರ ಎರಡನೇ ಇನ್ನಿಂಗ್ಸ್‌ಗೆ ಸೂಕ್ತವೆನ್ನಿಸುವಂತಹ ಚಿತ್ರ ಯಾವುದೂ ಸಿಕ್ಕಿಲ್ಲ. ತಾನು ಈಗ ನಟಿಸುವಂತಹ ಚಿತ್ರಗಳು ಬರುತ್ತಿಲ್ಲ. ತಾವು ನಾಯಕಿ ಪಾತ್ರ ಮಾಡುವ ವಯಸ್ಸು ತಮ್ಮದಲ್ಲ. ತಮ್ಮ ಪ್ರತಿಭೆಗೆ ಸವಾಲೊಡ್ಡುವ ಪಾತ್ರ ಸಿಕ್ಕಿದರೆ ಖಂಡಿತ ಮತ್ತೆ ಚಿತ್ರಗಳಲ್ಲಿ ಅಭಿನಯಿಸುತ್ತೇನೆ ಎಂದಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಾವು ಒಂದು ಹಂತಕ್ಕೆ ಏರಿದ ನಂತರ ಜನರ ನಿರೀಕ್ಷೆಗಳು ದೊಡ್ಡದಿರುತ್ತವೆ. ಅವರ ನಿರೀಕ್ಷೆಗಳಿಗೆ ತಕ್ಕಂತಹ ಚಿತ್ರಗಳಲ್ಲಿ ಅಭಿನಯಿಸಬೇಕು. ಮತ್ತೆ ಮತ್ತೆ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ತಮಗೆ ಇಷ್ಟವಿಲ್ಲ. ಈಗ ತಾವು ಅಭಿನಯಿಸುವಂತಹ ಚಿತ್ರಗಳು ಬರುತ್ತಿಲ್ಲ ಎಂದಿದ್ದಾರೆ.
ತಮಗೆ ಸಾಕಷ್ಟು ಆಫರ್‌ಗಳು ಬಂದರೂ ಯಾವ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ. ಕಾರಣ ತಮಗೆ ಸವಾಲೊಡ್ಡುವ ಪಾತ್ರಗಳು ಸಿಗದೇ ಇರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ಸದ್ಯಕ್ಕೆ ಹೇಮಾ ಅವರು ನೃತ್ಯ, ಸಂಗೀತ, ಹರಿಕಥೆ ಕಲೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇವುಗಳಲ್ಲೇ ನೆಮ್ಮದಿ ಕಂಡುಕೊಂಡಿದ್ದೇನೆ ಎನ್ನುತ್ತಾರೆ ಹೇಮಾ ಪಂಚಮುಖಿ. (ಏಜೆನ್ಸೀಸ್)


Click it and Unblock the Notifications











