ಟಾಲಿವುಡ್‌ಗೆ ಬೆಂಗಳೂರು ಹುಡುಗಿ ಕೃತಿ ಖರಬಂದ
"ಇಲ್ಲೆ ಇಲ್ಲೆ ಎಲ್ಲೊ ನನ್ನ ಮನಸು ಕಾಣೆಯಾಗಿದೆ..." ಎಂದು ಕನ್ನಡ ಪ್ರೇಕ್ಷಕರ ಮನ ಸೆಳೆದ ಬೆಡಗಿ ಕೃತಿ ಖರಬಂದ. ಚಿರಂಜೀವಿ ಸರ್ಜಾ ಜೊತೆ ಈಕೆ ಅಭಿನಯಿಸಿದ 'ಚಿರು' ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬೆಂಗಳೂರಿನ ಈ ಹುಡುಗಿ ಈಗ ಟಾಲಿವುಡ್‌ಗೆ ಅಡಿಯಿಟ್ಟ್ಟಿದ್ದಾರೆ.
ತೆಲುಗಿನ ಡೈಲಾಗ್ ಕಿಂಗ್ ಮೋಹನ್ ಬಾಬು ಅವರ ಮಗ ಮಂಚು ಮನೋಜ್ ಮುಖ್ಯಭೂಮಿಕೆಯಲ್ಲಿರುವ 'ಮಿಸ್ಟರ್ ನೋಕಿಯಾ' ಚಿತ್ರದಲ್ಲಿ ನಾಯಕಿಯಾಗಿ ಕೃತಿ ಕಾಣಿಸಲಿದ್ದಾರೆ. ಕನ್ನಡದ 'ಬೋನಿ' ಚಿತ್ರದ ಮೂಲಕ ಕೃತಿ ಬೆಳ್ಳಿತೆರೆಗೆ ಪರಿಚಯವಾಗಿದ್ದರು. 'ಚಿರು' ಚಿತ್ರ ಆಕೆ ಅಭಿನಯದ ಎರಡನೇ ಚಿತ್ರ.
ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿನಯದ 'ತೀನ್ ಮಾರ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು ಕೃತಿ. ಈ ಚಿತ್ರದಲ್ಲಿನ ಆಕೆಯ ಅಭಿಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮತ್ತೊಂದು ತೆಲುಗು ಚಿತ್ರದಲ್ಲಿ ಅವಕಾಶ ಗಿಟ್ಟಿಸಿದ್ದಾರೆ. "ಮುಗುಳ್ನಗೆಯೇ ನನ್ನ ಆಭರಣ" ಎನ್ನುವ ಈಕೆ ಕನ್ನಡದಬಿಗ್ ಬಜೆಟ್ ಚಿತ್ರಕ್ಕೂ ಸಹಿಹಾಕಿರುವುದಾಗಿ ತಿಳಿಸಿದ್ದಾರೆ. ಆದರೆ ಆ ಚಿತ್ರವ ವಿವರಗಳ ಬಗ್ಗೆ ಮಾತ್ರ ಬಾಯ್ಬಿಟ್ಟಿಲ್ಲ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











