ಮಡಿಕೇರಿಗೆ ಬಂದು ಮಾತನಾಡಿದ ಮನಿಷಾ ಕೊಯಿರಾಲಾ

ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಕರ್ನಾಟಕಕ್ಕೆ ಬಂದಿದ್ದಾರೆ. ಮಡಿಕೇರಿಯಿಂದ ಐದು ಕಿ. ಮೀ. ದೂರದಲ್ಲಿರುವ ಡಾ. ಪ್ರೇಮನಾಥ್ ಪೂಂಜಾ ತೋಟದಲ್ಲಿ ಮೊನ್ನೆ ಬುಧವಾರ, ಮಾರ್ಚ್ 7, 2012ರಂದು ಪ್ರತ್ಯಕ್ಷವಾಗಿದ್ದರು ನಟಿ ಮನಿಷಾ ಕೊಯಿರಾಲಾ. ಅವರೊಂದು ಚಿತ್ರೀದ ಚಿತ್ರೀಕರಣದಲ್ಲಿ ಭಾಗವಹಿಸಲು ಅಲ್ಲಿಗೆ ಬಂದಿದ್ದರು.

ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕ ಲೆನಿನ್ ರಾಜೇಂದ್ರನ್ ನಿರ್ದೇಶನದ 'ಇಡಪದವಿ' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸುತ್ತಿರುವ ಮನಿಷಾ ಕೊಯಿರಾಲಾ, ಈ ಮೂಲಕ ದಕ್ಷಿಣ ಭಾರತದತ್ತ ಮುಖ ಮಾಡಿದಂತಾಗಿದೆ. ಬಾಲಿವುಡ್ ಚಿತ್ರಗಳಲ್ಲಿ ಈಕೆ ಇತ್ತೀಚಿಗೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.

ಮಡಿಕೇರಿಯಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮನಿಷಾ, ಕನ್ನಡದಲ್ಲಿ ಒಳ್ಳೆಯ ನಿರ್ದೇಶಕರ ಚಿತ್ರದಲ್ಲಿ ನಟಿಸಲು ಆಫರ್ ಬಂದರೆ ನಾನು ಖಂಡಿತ ಸಿದ್ಧ. ನಾನು ಒಂದೇ ಭಾಷೆಗೆ ಸೀಮತವಾಗಲಾರೆ. ಬೇರೆ ಬೇರೆ ಭಾಷೆಗಳಲ್ಲಿ ನಟಿಸುವುದು ಪ್ರತಿಯೊಬ್ಬ ಕಲಾವಿದೆಗೂ ಸವಾಲು" ಎಂದಿದ್ದಾರೆ. ಇನ್ನು ಕನ್ನಡದ ನಿರ್ಮಾಪಕರು, ನಿರ್ದೇಶಕರು ಮನಿಷಾ ಮೊಬೈಲ್ ಗೆ ಕಾಲ್ ಮಾಡಬಹುದು. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Manisha Koirala life is said to have inspired Madhur Bhandarkar for his next film Heroine starring Kareena Kapoor and Arjun Rampal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X