ರಾಜಕುಮಾರಿ ನಿಖಿತಾ ಎಲ್ಲಿದ್ದಾಳೆ ಗೊತ್ತಾ?
ಅಸಲಿಗೆ ಆಮದು ನಟಿ ನಿಖಿತಾ ತುಕ್ರಲ್ ಎಲ್ಲಿದ್ದಾಳೆ? ಓಂ ಪ್ರಕಾಶ್ ರಾವ್ ಗೆ ಗೊತ್ತು. ನಿರ್ದೇಶಕ ಓಂಗೂ ನಿಖ್ಖಿಗೂ ಏನು ಸಂಬಂಧ? ಏನೋ ಹೊಸ ಕಥೆ ಕಟ್ತಾ ಇಲ್ಲ.
ಗಾಂಧಿನಗರದ ಎಲುಬಿಲ್ಲದ ನಾಲಗೆಗಳ ಖೆಡ್ಡಾಗೆ ನಿಖಿತಾ ಅನೇಕ ಬಾರಿ ತುತ್ತಾಗಿದ್ದಾರೆ. ಮೈಚಳಿ ಬಿಟ್ಟು ನಟಿಸಿದ ತಕ್ಷಣ ನಾಯಕ ನಟನ ಜೊತೆ ಆಫ್ ಸ್ಕ್ರೀನ್ ರೋಮಾನ್ಸ್ ಎಂದು ಬಣ್ಣ ಹಚ್ಚುತ್ತದೆ. ಅದು ಹಾಗಿರಲಿ.
ನಿಖಿತಾ ಬಗ್ಗೆ ಓಂಗೆ ಗೊತ್ತು ಏಕೆಂದರೆ, ಓಂ ಪ್ರಕಾಶ್ ರಾವ್ ಅವರ ಹೋಮ್ ಪ್ರೊಡಕ್ಷನ್ ನ ಈ ಚಿತ್ರಕ್ಕೆ ನಟಿ ನಿಖಿತಾ ಕೂಡಾ ನಿರ್ಮಾಪಕರಾಗಿದ್ದಾರೆ. ಆದಿತ್ಯ ಹೀರೋ, ದುನಿಯಾ ವಿಜಯ್ ಈ ಚಿತ್ರದ ನಿರ್ಮಾಣ ಬಿಟ್ಟರೆ ನಿಖಿತಾ ಕೈಲಿ ದರ್ಶನ್ ಜೋಡಿ ಸಂಗೊಳ್ಳಿ ರಾಯಣ್ಣ ಚಿತ್ರ ಉಳಿದಿದೆ.
ನಿಖಿತಾ ಸಿನಿ ಪಯಣ: 2002ರಲ್ಲಿ ಮಲೆಯಾಳಂ ಚಿತ್ರದ ಮೂಲದ ಬಣ್ಣದ ಬದುಕಿಗೆ ಕಾಲಿಟ್ಟರು. ನಂತರ ಕನ್ನಡದಲ್ಲಿ ಮಹಾರಾಜ, ನೀ ಟಾಟಾ ನಾ ಬಿರ್ಲಾ, ರಾಜಕುಮಾರಿ, ನಾರಿಯ ಸೀರೆ ಕದ್ದ, ಗನ್, ಹಣೆಬರಹ, ವಂಶಿ, ಯೋಧ, ಪ್ರಿನ್ಸ್, ದುಬಾಯ್ ಬಾಬು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಕಾಟನ್ ಪೇಟೆ, ಪ್ರಿಯಸಖ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂನ ಸುಮಾರು 35ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಿಖಿತಾ, ಉತ್ತಮ ಡ್ಯಾನ್ಸರ್ ಕೂಡಾ. ಕನ್ನಡದ ವಂಶಿ, ತಮಿಳಿನ ಸರೋಜ ಹಾಗೂ ತೆಲುಗಿನ ಡಾನ್ ಹೆಸರು ತಂದುಕೊಟ್ಟ ಚಿತ್ರ.
ದಾಂಪತ್ಯ ಕಲಹಕ್ಕೆ ಕಾರಣಳಾಗಿರುವ ಸುಮಾರು 30 ವರ್ಷ ವಯಸ್ಸಿನ ನಿಖಿತಾ ಮಾಧ್ಯಮಗಳ ಮುಂದೆ ಬಂದು ತಮ್ಮ ಪ್ರತಿಕ್ರಿಯೆ ಇನ್ನೂ ನೀಡಿಲ್ಲ. ದರ್ಶನ್ ಒಮ್ಮೆ ನಿಖಿತಾ ಜೊತೆ ಅಂಥ ಸಂಬಂಧವೇನಿಲ್ಲ ಎಂದು ಹೇಳಿದ್ದು ಬಿಟ್ಟರೆ ಮತ್ತೆ ಆ ಬಗ್ಗೆ ಚಕಾರ ಎತ್ತಿಲ್ಲ.
ಹಾಲುಗಲ್ಲದ ಚೆಲುವೆಯ ಕಾಂತಿಯುಕ್ತ ಕಂಗಳಲ್ಲಿ ಅಶ್ರುಧಾರೆ ಹರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರೆ ಅದಕ್ಕೆ ನಾವು ಕಾರಣರಲ್ಲ. ಆ ಬಗ್ಗೆ ವಿವರಗಳನ್ನು ನಿರೀಕ್ಷಿಸಿ...


Click it and Unblock the Notifications












