For Quick Alerts
  ALLOW NOTIFICATIONS  
  For Daily Alerts

  ಮಹಿಳಾ ಕಾನೂನನ್ನು ಬಾಯಿಗೆತ್ತಿಕೊಂಡ ರಮ್ಯಾ

  |

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ದಿನಾಚರಣೆಯ ಪ್ರಯುಕ್ತ ಎಂಬಂತೆ ಮಹಿಳೆಯರ ಬಗ್ಗೆ ರಮ್ಯಾ ಹೆಚ್ಚಿನ ಕಾಳಜಿಯಿಂದ ಮಾತನಾಡಿದ್ದಾರೆ. ಇದೀಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿಸುತ್ತಿರುವ, ಯುವ ಕಾಂಗ್ರೆಸ್ ಸದಸ್ಯೆಯೂ ಆಗಿರುವ ರಮ್ಯಾರ ಇತ್ತೀಚಿನ ಮಹಿಳಾ ಕಾಳಜಿ ಮಾತುಗಳು ಈ ವೇಳೆಯಲ್ಲಿ ಹೆಚ್ಚಿನ ಮಹತ್ವ ಪಡೆಯಲಿವೆ.

  ಹೆಣ್ಣಿನ ಪರವಾಗಿ ಮಾತನಾಡಿರುವ ರಮ್ಯಾ "ಹೆಣ್ಣಿನ ಪ್ರತಿ ಹಂತದ ಬೆಳವಣಿಗೆ ಮತ್ತು ಸಾಧನೆಗೆ ಕೇವಲ ಕುಟುಂಬದವರು ಮಾತ್ರ ಕಾರಣರಾಗುವುದಿಲ್ಲ. ಸಮಾಜವೂ ಕಾರಣವಾಗಿರುತ್ತದೆ. ಸಮಾಜ ಹೆಣ್ನನ್ನು ಗೌರವಿಸುವುದರೊಂದಿಗೆ ಆಕೆಯ ಸಂಕಷ್ಟದಲ್ಲೂ ಭಾಗಿಯಾಗಬೇಕು. ಉದ್ಯೋಗಸ್ಥ ಮಹಿಳೆಯರಿಗೆ ನೀಡುವ ಸೌಲಭ್ಯಗಳು ಹೆಚ್ಚಾಗಬೇಕು. ಹೆಣ್ಣಿನ ರಕ್ಷಣೆಗೆ ಕಾನೂನು ಸ್ಪಂದಿಸುವ ಕೆಲಸ ಆಗಬೇಕು" ಎಂದಿದ್ದಾರೆ.

  ರಮ್ಯಾ ಏನೇ ಹೇಳಿದರೂ ಹೇಳದಿದ್ದರೂ ಅದಕ್ಕೊಂದು ಅರ್ಥವಿರುತ್ತದೆ. ಹಾಗೇ, ಅವರು ಏನೇ ಮಾಡಿದರೂ ಮಾಡದಿದ್ದರೂ ಅದಕ್ಕೂ ಕೂಡ. ಸದ್ಯಕ್ಕೆ ಪ್ಲಾಂಟಿಂಗ್ ನಲ್ಲಿ ಆಸಕ್ತಿ ತಳೆದಿರುವ ರಮ್ಯಾ, ಕೊಡುಗೆಯಾಗಿ ಬಂದ ಒಂದಷ್ಟು ಗಿಡಗಳ ಆರೈಕೆಯಲ್ಲಿ ತೊಡಗಿದ್ದಾರಂತೆ. ಜೊತೆಗೆ ಸ್ಟೀವ್ ಜಾಬ್ಸ್ ಅವರ ಅಟೋಬಯಾಗ್ರಫಿ ಪುಸ್ತಕ ಓದುವುದರಲ್ಲಿ ಕೂಡ ತೊಡಗಿಕೊಂಡಿದ್ದಾರಂತೆ. (ಒನ್ ಇಂಡಿಯಾ ಕನ್ನಡ)

  Read more about: ರಮ್ಯಾ ramya
  English summary
  Actress Ramya told that in modern days also, Women gets very low remuneration comparing to men. It is the same picture in filmland and also in every field.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X