ಪ್ರಸನ್ನನಿಗೆ ಪರವಶಳಾದ ಕೋಲ್ಗೇಟ್ ಸುಂದರಿ ಸ್ನೇಹಾ
ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳ ಕೋಲ್ಗೇಟ್ ಸುಂದರಿ ಸ್ನೇಹಾಗೆ ಕಂಕಣಭಾಗ್ಯ ಕೂಡಿಬಂದಿದೆ. ತಮಿಳು ಚಿತ್ರಗಳ ನಟ ಹಾಗೂ ತನ್ನ ಬಾಯ್ ಫ್ರೆಂಡ್ ಪ್ರಸನ್ನ ಅವರನ್ನು ಸ್ನೇಹಾ ವರಿಸಲಿದ್ದಾರೆ. ಬಹುಶಃ ಇವರೀರ್ವರ ಮದುವೆ 2012ರ ಮಾರ್ಚ್ ತಿಂಗಳಲ್ಲಿ ನೆರವೇರುವ ಸಾಧ್ಯತೆಗಳಿವೆ.
ಇವರಿಬ್ಬರೂ ತಮಿಳಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. ಅಲ್ಲಿಂದ ಆರಂಭವಾದ ಇವರ ಪ್ರೇಮಯಾನ ಈಗ ಮದುವೆ ತನಕ ಬಂದು ನಿಂತಿದೆ. ಇವರಿಬ್ಬರ ಮದುವೆ ವಿಷಯ ತಮಿಳು ಚಿತ್ರರಂಗದಲ್ಲಿ ಲೀಕ್ ಆಗಿದ್ದೇ ತಡ, ಇಬ್ಬರೂ ಮಾಧ್ಯಮಗಳ ಕಣ್ಣು ತಪ್ಪಿಸಿ ಐಸ್‌ಪೈಸ್ ಆಡುತ್ತಿದ್ದಾರೆ.
ಮಾಧ್ಯಮಗಳ ಕಣ್ಣಿಗೆ ಬಿದ್ದಾಗ ತಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಕಿವಿಗೆ ಹೂವಿನ ಮೇಲೊಂದು ಹೂವು ಸಿಕ್ಕಿಸುತ್ತಿದ್ದಾರೆ. ಅಧಿಕೃತವಾಗಿ ಇವರಿಬ್ಬರ ಮದುವೆ ಸುದ್ದಿ ಇನ್ನೂ ಹೊರಬೀಳದಿದ್ದರೂ ಇಬ್ಬರೂ ಒಬ್ಬರಿಗೊಬ್ಬರು ಪರವಶರಾಗಿವುದಂತೂ ನಿಜ. ಅಂದಹಾಗೆ ಕನ್ನಡದಲ್ಲಿ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಸ್ನೇಹಾ ಅಭಿನಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











