»   »  ತಾರಾ, ವೇಣು ದಂಪತಿಗಳಿಂದ ಸತ್ಯನಾರಾಯಣ ಪೂಜೆ

ತಾರಾ, ವೇಣು ದಂಪತಿಗಳಿಂದ ಸತ್ಯನಾರಾಯಣ ಪೂಜೆ

Subscribe to Filmibeat Kannada
Actress Tara, Venu performs Satyanarayana Pooja
ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ತಾರಾ, ರಾಜ್ಯ ಪ್ರಶಸ್ತಿ ವಿಜೇತ ಎಚ್ ಸಿ ವೇಣು ದಂಪತಿಗಳ ಮನೆಯಲ್ಲಿ ಶುಕ್ರವಾರ (ಮಾ.6) ಹಬ್ಬದ ವಾತಾವರಣ. ತಾರಾ ದಂಪತಿಗಳು ಕೈಗೊಂಡಿದ್ದ್ದ ಶ್ರೀ ಸತ್ಯನಾರಾಯಣ ಪೂಜೆಗೆ ಕನ್ನಡ ಚಿತ್ರರಂಗದ ನಟ, ನಟಿಯರು ಸೇರಿದಂತೆ ಪತ್ರಕರ್ತರನ್ನು ಆಹ್ವಾನಿಸಿದ್ದರು. ಅದಕ್ಕೂ ಮುನ್ನಾ ದಿನ ಅಂದರೆ ಗುರುವಾರ ತಾರಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ತೀರಾ ವೈಯಕ್ತಿಕವಲ್ಲದ ಈ ಪೂಜಾ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಮಾಲಾಶ್ರೀ, ಅನುಪ್ರಭಾಕರ್, ರಮೇಶ್ ಅರವಿಂದ್ ಮತ್ತವರ ಪತ್ನಿ ಅರ್ಜನಾ, ಸುಧಾರಾಣಿ, ಹೇಮಾ ಚೌದರಿ, ಕೆಸಿಎನ್ ಚಂದ್ರಶೇಖರ್ ಸೇರಿದಂತೆ ಸಿನಿಮಾ ಪತ್ರಕರ್ತರು, ಕುಟುಂಬಿಕರು, ಸಂಬಂಧಿಕರು ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ತಾರಾ ದಂಪತಿಗಳು ಬಂದ ಅತಿಥಿಗಳಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಇಪ್ಪತ್ತೈದ್ದಕ್ಕೂ ಹೆಚ್ಚು ಭಕ್ಷ್ಯ ಭೋಜ್ಯಗಳು ಅತಿಥಿಗಳ ಮನಸ್ಸಂತೋಷ ಪಡಿಸಿದವು. ಶ್ರೀಸತ್ಯನಾರಾಯಣ ಪೂಜಾಫಲವು ತಾರಾ ಮತ್ತು ವೇಣು ದಂಪತಿಗಳಿಗೆ ಶುಭಪ್ರದವಾಗಲಿ ಎಂದು ದಟ್ಸ್ ಕನ್ನಡ ಹಾರೈಕೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಭಾರತೀಯ ಜನತಾ ಪಕ್ಷಕ್ಕೆ 'ತಾರಾ' ಬಲ?
ನಟಿ ತಾರಾ ಸುರಿಸಿದ ಗಂಗಾ ಕಾವೇರಿ ಪ್ರವಾಹ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada