ಐಶ್ವರ್ಯಾ ಹೆರಿಗೆ: ಸೆವೆನ್ ಹಿಲ್ಸ್ ಆಸ್ಪತ್ರೆಗೆ ಬಿಗಿ ಭದ್ರತೆ
ಬಾಲಿವುಡ್ ನಟಿ, ಬಿಗ್ ಬಿ ಸೊಸೆ ಐಶ್ವರ್ಯಾ ರೈ ಬಚ್ಚನ್ ಗೆ ನಾಳೆ (ನವೆಂಬರ್ 10) ನಂತರದಲ್ಲಿ ಹೆರಿಗೆ ಆಗಲಿದೆ. ಹಾಗಾಗಿ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಆಸ್ಪತ್ರೆಯಲ್ಲಿನ ವ್ಯವಸ್ಥೆಯ ಬಗ್ಗೆ ಪ್ರತ್ಯೇಕ ನಿಗಾ ವಹಿಸಲಾಗಿದ್ದು ರಹಸ್ಯ ಕಾಪಾಡುವ ಕುರಿತಂತೆ ಆಸ್ಪತ್ರೆ ಸಂಪೂರ್ಣ ಸಜ್ಜಾಗಿದೆ.
ಸೆವೆನ್ ಹಿಲ್ಸ್ ಆಸ್ಪತ್ರೆಯ 5ನೇ ಮಹಡಿಯಲ್ಲಿ ಆಧುನಿಕ, ಸುಸಜ್ಜಿತ ಕೋಣೆ ಐಶೂಗಾಗಿ ಮೀಸಲಾಗಿದೆ. 'ಸ್ಪಾ' ಅಟ್ಯಾಚ್ಡ್ ರೂಂ ಇದಾಗಿದ್ದು ಎಲ್ಲೆಡೆಯಲ್ಲೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕರ್ತವ್ಯ ನಿರತ ಆಸ್ಪತ್ರೆಯ ಸಿಬ್ಬಂದಿಗೆ ಮೊಬೈಲ್ ಕೊಂಡೊಯ್ಯದಂತೆ ತಾಕೀತು ಮಾಡಲಾಗಿದೆ.
ಅವರ ಹಾಗೂ ಅವರ ಕುಟುಂಬ ಫೋಟೋ ತೆಗೆಯುವದನ್ನು ಆಸ್ಪತ್ರೆಯಲ್ಲಿ ನಿಷೇಧಿಸಲಾಗಿದ್ದು ಹೆಚ್ಚಿನ ಸೆಕ್ಯುರಿಟಿಯನ್ನು ನಿಯೋಜಿಸಲಾಗಿದೆ. ಐಶ್ ಹೆರಿಗೆಗಾಗಿ ಸಂಪೂರ್ಣ ಆಸ್ಪತ್ರೆಯೇ ಸಿಂಗಾರಗೊಂಡು ಸಂಭ್ರಮಿಸುತ್ತಿದೆ. ಐಶೂ ಹಾಗೂ ಮಗುವಿನ ಆರೈಕೆಗಾಗಿ ಆಸ್ಪತ್ರೆ ಕಾತರದಿಂದ ಕಾಯುತ್ತಿದೆ. (ಏಜೆನ್ಸೀಸ್)
More from Filmibeat
English summary
The hospital staff at Seven Hills where Aishwarya Rai Bachchan will deliver her first born are working overtime to ensure that everything is in order when the to-be-mom checks in tomorrow for her delivery.
ಬಾಲಿವುಡ್ ಐಶ್ವರ್ಯ ರೈ ಬಚ್ಚನ್ ಬಾಂದ್ರಾ ಮುಂಬೈ ಹೆರಿಗೆ ಆಸ್ಪತ್ರೆ ಬಾಲಿವುಡ್ ಗಾಸಿಪ್ bollywood aishwarya rai bachchan bandra delivery hospital security bollywood gossip


Click it and Unblock the Notifications











