ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳಿಂದ ಕಲ್ಲು ತೂರಾಟ

ಎರಡು ಬಿಎಂಟಿಸಿ ಬಸ್‌ಗಳು ಹಾಗೂ ಒಂದು ಪುಷ್ಪಕ್ ಬಸ್ ಮೇಲೆ ದರ್ಶನ್ ಅಭಿಮಾನಿಗಳು ಶುಕ್ರವಾರ ಸಂಜೆ ಕಲ್ಲು ತೂರಾಟ ನಡೆಸಿದರು. ಈ ಘಟನೆ ವಿಜಯನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ಇದೇ ವೇಳೆ, ಯಾರೋ ಏನೋ ಗೊತ್ತಿಲ್ಲ, ಸುವರ್ಣ ಮತ್ತಿತರ ನ್ಯೂಸ್ ಚಾನೆಲಿಗೆ ಸೇರಿದ ಕ್ಯಾಮಾರಗಳನ್ನು ಧ್ವಂಸಗೊಳಿಸಿದ್ದಾರೆ.
ಪತ್ನಿಯ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ದರ್ಶನ್ ಅವರನ್ನು ನೋಡಲು ಅವರ ಅಪಾರ ಅಭಿಮಾನಿಗಳು ವಿಜಯನಗರ ಪೊಲೀಸ್ ಠಾಣೆಗೆ ಬಳಿ ಜಮಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಂಡ ದರ್ಶನ್ ಅಭಿಮಾನಿಗಳು ಕಲ್ಲು ತೂರಾಟ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. (ದಟ್ಸ್‌ಕನ್ನಡ ಸಿನಿವರ್ತೆ) [ಫುಲ್ ಕವರೇಜ್]
More from Filmibeat
English summary
Three buses belonging to BMTC were damaged in stone pelting by an irate fans of Kannada actor Darshan in Bangalore. Fans demand release of the actor who was arrested on Friday for allegedly assaulting his wife Vijayalakshmi.
ದರ್ಶನ್ ಚಾಲೆಂಜಿಂಗ್ ಸ್ಟಾರ್ ನಟ ಪೊಲೀಸ್ ಬಂಧನ ಬೆಂಗಳೂರು darshan challenging star actor police arrest bangalore


Click it and Unblock the Notifications











