ಅಣಜಿ, ಓಂ ವಿರುದ್ಧ ಮಾನನಷ್ಟ ಮೊಕದ್ದಮೆ ಗುಡುಗು

Anaji Om Prakash Rao
ಭೀಮಾ ತೀರದಲ್ಲಿ ಚಿತ್ರದಲ್ಲಿ ಬಳಸಲಾಗಿರುವ ಕೇಶಪ್ಪ ತಾವರಕೇಡ ಹೆಸರಿನ ವ್ಯಕ್ತಿಯ ಮಗ ಮಂಜುನಾಥ್ ತಾವರಕೇಡ ಸುದ್ದಿಗೋಷ್ಠಿ ನಡೆಸಿ ಈ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಚಿತ್ರದಲ್ಲಿರುವ ಕೇಶಪ್ಪ ತಾವರಕೇಡ ಹೆಸರನ್ನು ಕಿತ್ತುಹಾಕದಿದ್ದರೆ ನಿರ್ಮಾಪಕ ಹಾಗೂ ನಿರ್ದೇಶಕರಿಬ್ಬರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಅವರು ಎಚ್ಚರಿಸಿದ್ದಾರೆ.

"ನಮ್ಮದು ಮರ್ಯಾದಸ್ಥ ಕುಟುಂಬ. ಈ ಚಿತ್ರದಲ್ಲಿ ಬಂದ ಆ ಪಾತ್ರದಿಂದ ನಮ್ಮ ಕುಟುಂಬಕ್ಕೆ ಅವಮಾನವಾಗಿದೆ. ಜನರು ನಮ್ಮನ್ನು ತಪ್ಪಾಗಿ ತಿಳಿದುಕೊಳ್ಳಲು ಈ ಚಿತ್ರದಿಂದ ಅವಕಾಶವಾಗಿದೆ. ಹಾಗಾಗಿ ಚಿತ್ರದಿಂದ ಆ ಪಾತ್ರ ಹಾಗೂ ಹೆಸರನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸುತ್ತೇವೆ ಹಾಗೂ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ. ಅಷ್ಟೇ ಅಲ್ಲ, ಮಾನನಷ್ಟ ಮೊಕದ್ದಮೆ ಹೂಡುತ್ತೇವೆ" ಎಂದು ಹೇಳಿದ್ದಾರೆ.

"ನಿರ್ಮಾಪಕ ಅಣಜಿ ನಾಗರಾಜ್ ಅವರಿಗೆ ನಾನು ಯಾವುದೇ ಜೀವ ಬೆದರಿಕೆ ಕರೆ ಮಾಡಿಲ್ಲ. ಚಿತ್ರದಲ್ಲಿ ಬರುವ ಆ ಪಾತ್ರ ಹಾಗೂ ಕೆಟ್ಟದಾಗಿ ಬಿಂಬಿಸಿರುವ ಕುರಿತು ಮಾತನಾಡಿದ್ದೇನೆ ಅಷ್ಟೇ" ಎಂದಿದ್ದಾರೆ ಮಂಜುನಾಥ್ ತಾವರಕೇಡ. ಮಂಜುನಾಥ್ ಮಾತಿಗೆ ಪ್ರತಿಕ್ರಿಯಿಸಿರುವ ಅಣಜಿ ನಾಗರಾಜ್ "ಮಂಜುನಾಥರಿಂದ ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಅವರು ಕರೆ ಮಾಡಿ ಮಾತನ್ನಾಡಿದ್ದಾರಷ್ಟೇ" ಎಂದು ಸ್ಪಷ್ಟಪಡಿಸಿದ್ದಾರೆ.

ಕೇಶಪ್ಪ ತಾವರಕೇಡ ಹೆಸರು ಮತ್ತು ಪಾತ್ರ ಕಿತ್ತುಹಾಕುವ ಆಗ್ರಹಕ್ಕೆ ಅಣಜಿ ನಾಗರಾಜ್ "ನಾನು ಚಿತ್ರಕ್ಕೆ ಹಣ ಹಾಕಿದವನು, ನಿರ್ಮಾಪಕ ಅಷ್ಟೇ. ಚಿತ್ರದ ರೂವಾರಿ, ನಿರ್ದೇಶಕರ ಜೊತೆ ಮಾತನಾಡಿ ಖಂಡಿತವಾಗಿಯೂ ಹೆಸರನ್ನು ಮ್ಯೂಟ್ ಮಾಡಿಸುತ್ತೇನೆ. ಅದಕ್ಕೆ ನಾಲ್ಕೈದು ದಿನ ವೇಳೆ ತಗಲುತ್ತದೆ. ಪಾತ್ರವನ್ನು ಕಿತ್ತು ಹಾಕುವ ಕುರಿತೂ ನಿರ್ದೇಶಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ" ಎಂದು ಭರವಸೆ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Movie Beema Teeradalli Cotroversy has been continued. Manjunath Tavarakead, son of Keshappa Tavarakeda told that he will go to file Defamation Case against producer Anaji Nagaraj and director Om Prakash Rao, if they did'nt remove the name and role of his father Keshappa Tavarakeda in this movie.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X