»   »  ಸಂಪಿಗೆ ಪರಿಮಳದಲ್ಲಿ ಬಿಯಾಂಕ ದೇಸಾಯಿ

ಸಂಪಿಗೆ ಪರಿಮಳದಲ್ಲಿ ಬಿಯಾಂಕ ದೇಸಾಯಿ

Subscribe to Filmibeat Kannada
Biyanka Desai
ಬಿಯಾಂಕರ ನಾಲ್ಕನೆ ಚಿತ್ರವನ್ನು ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶಿಸಲಿದ್ದಾರೆ. ಚಿತ್ರದ ಶೀರ್ಷಿಕೆ 'ಚೆಲ್ಲಿದರು ಸಂಪಿಗೆಯಾ' ಎಂದು, ಡಿ.10ರಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರಕ್ಕೆ ನಾರಾಯಣ್ ಅವರೆ ಹಾಡುಗಳನ್ನು ಬರೆದಿದ್ದಾರೆ. ಬಿಯಾಂಕ ನಟನೆಯ 'ರಾಕಿ' ಚಿತ್ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆಕೆ ನಟನೆಯ 'ಗುಲಾಮ'ಮತ್ತ್ತು 'ಯೋಗಿ'ಚಿತ್ರಗಳು ತೆರೆ ಕಾಣಬೇಕಾಗಿವೆ.

ಕನ್ನಡದಲ್ಲಿ ಬ್ಯುಸಿಯಾಗಿರುವ ಪರಭಾಷಾ ನಟಿಯರಲ್ಲಿ ಪೂಜಾಗಾಂಧಿ ಅವರಿಗೆ ಮೊದಲ ಸ್ಥಾನ ದಕ್ಕುತ್ತದೆ. ನಂತರದ ಸ್ಥಾನಗಳನ್ನು ನಿಕಿತಾ ಮತ್ತು ಬಿಯಾಂಕಾ ದೇಸಾಯಿ ಹಂಚಿಕೊಂಡಿದ್ದಾರೆ. 'ಮಹಾರಾಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಕಿತಾ ನಂತರ 'ರಾಜಕುಮಾರಿ', 'ವಂಶಿ'ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡವರು. ಈಗ ಆಕೆಯನ್ನು ಹಿಂದಿಕ್ಕಿ ಮುನ್ನುಗ್ಗ್ಗಲು ಬಿಯಾಂಕ ದೇಸಾಯಿ ಅಣಿಯಾಗಿದ್ದಾರೆ.

ಉಪ್ಪಿ ಜೊತೆಗಿನ 'ದುಬೈ ಬಾಬು' ಹಾಗೂ ಓಂಪ್ರಕಾಶ್ ರಾವ್ ನಿರ್ದೇಶನದ ದರ್ಶನ್ ಚಿತ್ರದಲ್ಲೂ ನಿಕಿತಾ ನಟಿಸುತ್ತಿದ್ದಾರೆ. ಈಕೆ ನಟಿಸಿದ ಎರಡು ಚಿತ್ರಗಳು ತೆರೆಕಂಡಿವೆ. ಆದರೆ ನಟಿ ಬಿಯಾಂಕ ದೇಸಾಯಿ ಕನ್ನಡದಲ್ಲಿ ನಟಿಸಿದ ಒಂದೇ ಒಂದು ಚಿತ್ರವೂ ಇನ್ನು ಬಿಡುಗಡೆ ಭಾಗ್ಯ ಕಂಡಿಲ್ಲ. ಇದುವರೆಗೂ ಬಿಯಾಂಕ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಎಸ್ ನಾರಾಯಣ್ ರ ನಾಲ್ಕನೆ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಿನ್ನಾಣಗಿತ್ತಿ ಬಿಯಾಂಕಾ ದೇಸಾಯಿ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada