ನಿಖಿತಾ ಬ್ಯಾನ್ ನಾಟಕದಲ್ಲಿ ನಮ್ಮ ಪಾತ್ರವೇನಿಲ್ಲ

ಮತ್ತೆ ಪತ್ರಕರಲ್ಲೊಬ್ಬರ ಪ್ರಶ್ನೆ ದರ್ಶನ್ ಗೆ- "ನೀವು ಸಿನಿಮಾದ ಪಬ್ಲಿಸಿಟಿ, ಪ್ರಮೋಷನ್ ಇವೆಕ್ಕೆಲ್ಲಾ ಸಹಕಾರ ಕೊಡುವುದಿಲ್ಲ ಅನ್ನೋ ಆಪಾದನೆ ಇದೆ. ಅದಕ್ಕೆ ಏನು ಹೇಳ್ತೀರಾ?" ನಗುತ್ತಾ ಉತ್ತರವಾದರು ದರ್ಶನ್- ಇಲ್ಲ, ಹಾಗೇನೂ ಇಲ್ಲ, ನಾನು ಮೊದಲೇ ಮಾತಾಡಿರ್ತೀನಿ, ಅದರ ಪ್ರಕಾರ ನಡ್ಕೋಳ್ತೀನಿ. ಬೇರೆ ನಿರ್ಮಾಪಕರಿಗೆ ನನ್ನ ಕಾಲ್ ಶೀಟ್ ಕೊಟ್ಟಿರುವಾಗ, ಅವರಿಗೆ ತೊಂದರೆ ಆಗಬಾರದೆಂದು ಬಂದಿರುವುದಿಲ್ಲ ಅಷ್ಟೇ. ಅದರಿಂದ ಇನ್ನೊಬ್ಬ ನಿರ್ಮಾಪಕರಿಗೆ ತೊಂದರೆ ಆಗುತ್ತದೆಯಲ್ಲವೇ?!"
ಮತ್ತೊಂದು ಪ್ರಶ್ನೆಗೆ ದರ್ಶನ್ ಉತ್ತರ ಹೀಗಿತ್ತು " ಹೌದು, ಖಂಡಿತವಾಗ್ಲೂ ನಾನು ಬಿಡುಗಡೆ ಆದ ಮೇಲೆ ಹೇಳಿದ ಹಾಗೆ, ಪ್ರತಿಯೊಂದು ಜಿಲ್ಲೆಗೆ ಹೋಗಿ 'ರೋಡ್ ಶೋ' ಮಾಡಿ ಜನರ ಕ್ಷಮೆ ಕೇಳ್ತೀನಿ. ಅವರು ನಾನು ಮಾಡಿದ ತಪ್ಪನ್ನು ಕ್ಷಮಿಸಿ, ತೋರಿಸಿದ ಅಭಿಮಾನಕ್ಕೆ 'ಥ್ಯಾಂಕ್ಸ್' ಹೇಳ್ತೀನಿ". ಈ ಉತ್ತರದ ಹಿಂದಿನ ಪ್ರಶ್ನೆಯ ಅಗತ್ಯ ಈಗಿಲ್ಲ ತಾನೇ?
ನಂತರ ಜೈಲಿನ ಅನುಭವದಿಂದ ದರ್ಶನ್ ಬಹಳಷ್ಟು ಬದಲಾಗಿದ್ದಾರೆ ಎಂದರು ವಿಜಯಲಕ್ಷ್ಮಿ. ಇಬ್ಬರೂ ಪರಸ್ಪರ ನಗುತ್ತಾ "ಈ ಕೆಟ್ಟ ಅನುಭವದಿಂದ ಸಾಕಷ್ಟು ಕಲ್ತಿದೀವಿ. ನಮ್ಮಿಬ್ಬರ ಪ್ರೀತಿ ಇನ್ನೂ ಗಟ್ಟಿಯಾಗಿದೆ. ಈ ಒಂದು ತಿಂಗಳಿನ ಬೇರ್ಪಡುವಿಕೆ ನಮ್ಮಿಬ್ಬರನ್ನೂ ಇನ್ನೂ ಹತ್ತಿರಕ್ಕೆ ತಂದಿದೆ" ಎಂದದ್ದು ಖುಷಿ ತಂತು.
ದಂಪತಿಗಳ ಮಾತು ಮುಗಿಯುತ್ತಿದ್ದಂತೆ ದರ್ಶನ್ ಸಹೋದರ ದಿನಕರ್ ಮೈಕನ್ನು ಕೈಗೆತ್ತಿಕೊಂಡು, "ಇವರಿಬ್ಬರೂ ತುಂಬಾ ಅನ್ಯೋನ್ಯವಾಗಿಯೇ ಇದ್ದರು, ಈಗಲೂ ಇದ್ದಾರೆ, ಮಧ್ಯೆ ಅದೊಂದು ಕೆಟ್ಟ ಘಟನೆ ನಡೆದೋಯ್ತು.
ಅಣ್ಣ-ಅತ್ತಿಗೆ (ದರ್ಶನ್ ದಂಪತಿ), ಹಾಗೂ ನನ್ನ ಅಕ್ಕ-ಭಾವ ಇವರ ಪ್ರೀತಿ ಬಾಂಧವ್ಯವನ್ನು ನೋಡಿಯೇ ನಾನು ನನ್ನ ಮೊದಲ ಸಿನಿಮಾ 'ಜೊತೆ ಜೊತೆಯಲಿ' ನಿರ್ದೇಶಿಸಿದ್ದು. ನನಗೆ ಆಗ ಮದುವೆ ಆಗಿರಲಿಲ್ಲ. ಇವರ ಪ್ರೀತಿ, ದಾಂಪತ್ಯವೇ ನನಗೆ ಸ್ಪೂರ್ತಿಯಾಗಿದ್ದು" ಎಂದು ಹೇಳುವ ಮೂಲಕ ಅಣ್ಣ-ಅತ್ತಿಗೆಗೆ ಸಪೋರ್ಟ್ ಮಾಡಿ ಸಾಕ್ಷಾತ್ ಲಕ್ಷ್ಮಣನಂತೆ ಪಕ್ಕವೇ ಕುಳಿತಿದ್ದರು.
ಆಗ ಪತ್ರಕರ್ತರೊಬ್ಬರಿಂದ ತೂರಿ ಬಂದ ಪ್ರಶ್ನೆ "ಬಾಂಧವ್ಯ ಗಟ್ಟಿಯಿದ್ದೂ ಯಾಕೆ ನೀವು ಗಂಡನ ವಿರುದ್ಧ ಕಂಪ್ಲೇಂಟ್ ಕೊಟ್ರಿ?" ಅದಕ್ಕೆ ಹೀಗೆ ಉತ್ತರಿಸಿದರು ವಿಜಯಲಕ್ಷ್ಮಿ "ಒಮ್ಮೊಮ್ಮೆ ಕೋಪ ಬಂದಾಗ ಹೀಗಾಗುತ್ತೆ, ಆಮೇಲೆ ಎಲ್ಲಾ ಸರಿ ಹೋಗುತ್ತೆ, ನಮ್ಮದೂ ಹಾಗೇ."
ಮುಂದೇನಾಯಿತು ಅನ್ನೋದು ಮುಂದಿನ ಪುಟದಲ್ಲಿದೆ...


Click it and Unblock the Notifications











