ದರ್ಶನ್ ಚಿತ್ರ ನಿರ್ಮಾಪಕ-ನಿರ್ದೇಶಕರ ಮಾತುಗಳು

By ಶ್ರೀರಾಮ್ ಭಟ್
<ul id="pagination-digg"><li class="previous"><a href="/news/09-darshan-press-meet-in-bangalore-aid0172.html">« Previous</a>

Darshan
ನಂತರ ಮಾತಾನಾಡಿದವರು, ನಿರ್ದೇಶಕ ನಾಗಣ್ಣ. " ನಿರ್ಮಾಪಕರಿಗಾಗಲೀ, ನಿರ್ದೇಶಕರಿಗಾಗಲೀ ದರ್ಶನ್ ರಿಂದ ಯಾವುದೇ ತೊಂದರೆ ಆಗಿಲ್ಲ. ಸಿನಿಮಾ ಚೆನ್ನಾಗಿ ಬರಬೇಕೆಂದು ಸಾಕಷ್ಟು ಶ್ರಮ ಪಡುವ ವ್ಯಕ್ತಿ ದರ್ಶನ್. ಯಾವುದಕ್ಕೂ ಬೇಸರ ಮಾಡಿಕೊಳ್ಳುವುದಿಲ್ಲ. ನಮ್ಮ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಅವರಿಂದ ಯಾವುದೇ ತೊಂದರೆ ಆಗಿಲ್ಲ, ಅದು ಚಿಂಗಾರಿ ನಂತರ 2012 ರಲ್ಲಿ ಬಿಡುಗಡೆಯಾಗಲಿರುವ ಸಿನಿಮಾ" ಎಂದರು.

ಸದ್ಯ ಶೂಟಿಂಗ್ ಕೊನೆಯ ಹಂತದಲ್ಲಿರುವ 'ಚಿಂಗಾರಿ' ನಿರ್ಮಾಪಕರಲ್ಲೊಬ್ಬರಾದ ಮನು, "ನಮಗೂ, ದರ್ಶನ್ ಅವರಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಮಿಟ್ ಆಗಿರುವುದರ ಪ್ರಕಾರ ಎಲ್ಲವನ್ನೂ ಮಾಡಿದ್ದಾರೆ. ಇನ್ನುಳಿದಿರುವ ಶೂಟಿಂಗ್ ಪೂರ್ತಿಗೊಳಿಸಿ, 'ಸಾರಥಿ' ನೂರು ದಿನ ಪೂರೈಸಿದ ಮೇಲೆ 'ಚಿಂಗಾರಿ' ಯನ್ನು ತೆರೆಗೆ ತರಲಿದ್ದೇವೆ" ಎಂದರು.

ಇಲ್ಲಿಗೆ ಎಲ್ಲಾ ಮುಗಿಯಿತು ಅನ್ನುವಾಗ ಗಡ್ಡಧಾರಿ ಗೆಟಪ್ಪಿನಲ್ಲಿರುವ ದರ್ಶನ್ ಗೆ ಯಾರೋ ಕೇಳಿದರು, "ಹೀಗೆ ಗಡ್ಡ ಬಿಟ್ಟಿದ್ದು ಯಾಕೆ? "ದರ್ಶನ್ ನಗುತ್ತಾ ಉತ್ತರಿಸಿದರು... ಹಾಗೇ ಸುಮ್ಮನೆ, ಎರಡ್ಮೂರು ದಿನ ಇರಲಿ ಅಂತ"

ಹೀಗೆ ಮುಗಿದ ಪತ್ರಿಕಾಗೋಷ್ಠಿಯಿಂದ ಪತ್ರಕರ್ತರು ಹಾಗೂ ದರ್ಶನ್ ದಂಪತಿಗಳಿಬ್ಬರಿಗೂ ಧನ್ಯತಾಭಾವ ಮನೆಮಾಡಿತ್ತು. ಹಿನ್ನೆಲೆಯಲ್ಲಿ 'ತಪ್ಪು ಮಾಡೋದು ಸಹಜ ಕಣೋ.., ತಿದ್ದಿ ನಡೆಯೋನು ಮನುಜ ಕಣೋ...' ಎಂಬ ಹಾಡು ತೇಲಿಬರುತ್ತಿರುವಂತೆ ಭಾಸವಾಯಿತು.

ಕೊನೆಯದಾಗಿ ಹೇಳಬಹುದಾದದ್ದು ಇಷ್ಟು- ಈಗ ದರ್ಶನ್ ಬದಲಾಗಿದ್ದಾರೆ ಅನ್ನಿಸುವಂತಿದೆ ಅವರ ನಡೆ-ನುಡಿ. ಅದೇ ಸಹಜ. ಕಾಲ ಮತ್ತು ಪ್ರಕೃತಿಯಲ್ಲಿ ಬದಲಾವಣೆ ಸಹಜ. ಹೌದು, ಈಗ ದರ್ಶನ್ ಬದಲಾಗಿದ್ದಾರೆ. ಈ ಒಳ್ಳೆಯ ಬದಲಾವಣೆಯಿಂದ ಅವರಿಗೆ, ಅವರನ್ನು ನಂಬಿಬಂದವರಿಗೆ, ಸುತ್ತಲಿನ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಇದು ನಮ್ಮಾಸೆ. ಇದೇ ನಮ್ಮೆಲ್ಲರ ಹಾರೈಕೆ ಕೂಡ...

(ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/09-darshan-press-meet-in-bangalore-aid0172.html">« Previous</a>

More from Filmibeat

English summary
Challenging Star Darshan and his Wife Vijayalakshmi Organised a Press Meet in Bangalore City Institute. The Producers of Darshan Movies told that there is no problem from Darshan for their movies.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X