»   » ಚಾಲೆಂಜಿಂಗ್ ಸ್ಟಾರ್ 'ಸಾರಥಿ' ಭರ್ಜರಿ ಅರ್ಧ ಶತಕ

ಚಾಲೆಂಜಿಂಗ್ ಸ್ಟಾರ್ 'ಸಾರಥಿ' ಭರ್ಜರಿ ಅರ್ಧ ಶತಕ

Posted By:
Subscribe to Filmibeat Kannada

ಚಿಕಿತ್ಸೆ ಕಾಣದೆ ಸೊರಗುತ್ತಿದ್ದ ಕನ್ನಡ ಚಿತ್ರೋದ್ಯಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರ ಹೊಸ ಬಲ ತಂದಿದೆ. ಭರ್ಜರಿ ಅರ್ಧ ಸೆಂಚುರಿ ಬಾರಿಸಿರುವ 'ಸಾರಥಿ' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರ ತೆರೆಕಂಡಿರುವ ಅಷ್ಟೂ ಕೇಂದ್ರಗಳಲ್ಲಿ 'ಸಾರಥಿ' ಜಪ್ಪಯ್ಯ ಎನ್ನುತ್ತಿಲ್ಲ.

ಸಾಮಾನ್ಯವಾಗಿ ಕೆಲವು ಚಿತ್ರಗಳು ಬಂದಷ್ಟೇ ವೇಗವಾಗಿ ಎತ್ತಂಗಡಿಯಾಗುತ್ತವೆ. ಇನ್ನು ಕೆಲವು ಚಿತ್ರಗಳು ಒಂದು ಎರಡು ಅಬ್ಬಬ್ಬಾ ಎಂದರೆ ಮೂರು ವಾರಕ್ಕೆಲ್ಲಾ ಬಾಕ್ಸಾಫೀಸಲ್ಲಿ ಏದುಸಿರು ಬಿಡುತ್ತಿರುತ್ತವೆ. ಆದರೆ 'ಸಾರಥಿ' ಮಾತ್ರ ಆರು ಏಳನೇ ವಾರದಲ್ಲೂ ಗೂಳಿಯಂತೆ ಮುನ್ನುಗ್ಗುತ್ತಿರುವುದು ವಿಶೇಷ.

ಮೈಸೂರು, ಚಿತ್ರದುರ್ಗ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲೂ 'ಸಾರಥಿ' ಚಿತ್ರ ಸಿಕ್ಕಾಪಟ್ಟೆ ಹುಯಿಲೆಬ್ಬಿಸಿದೆ. ಸೊರಗಿ ಸುಣ್ಣವಾಗಿದ್ದ ಚಿತ್ರ ವಿತರಕರು 'ಸಾರಥಿ' ಚಿತ್ರದ ಸಕ್ಸಸ್ ಕಂಡು ಉಕ್ಕಿರಿಬಿಕ್ಕಿರಿಯಾಗಿದ್ದಾರೆ. ಒಟ್ಟಾರೆಯಾಗಿ 'ಸಾರಥಿ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. (ಒನ್‌ಇಂಡಿಯಾ ಕನ್ನಡ)

English summary
It's a day to cherish for Darshan fans. The actor's film Sarathi has completed 50 days. Directed by Dinakar Thoogudeepa. The film featured Sarath Kumar, Sharat Lohitashwa, Sithara, Bullet Prakash, Rangayana Raghu, Deepa Sanniddi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada