ಸೆಪ್ಟೆಂಬರ್ ತಿಂಗಳಲ್ಲೇ ತೆರೆಗೆ ದರ್ಶನ್ ಸಾರಥಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 'ಸಾರಥಿ' ಚಿತ್ರ ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆ ಭಾಗ್ಯ ಪಡೆಯಲಿದೆ. ದಿನಕರ ತೂಗುದೀಪ ನಿರ್ದೇಶಿಸಿರುವ ಚಿತ್ರ ಇದು. ಚಿತ್ರದ ಆಡಿಯೋ ಈಗಾಗಲೆ ಬಿಡುಗಡೆಯಾಗಿದ್ದು ಪಡ್ಡೆಹುಡುಗರ ನಾಲಿಗೆಯಲ್ಲಿ ನಲಿದಾಡುತ್ತಿದೆ.
ಸಾರಥಿ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೆ ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರದ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪತ್ನಿಯ ಮೇಲೆ ಹಲ್ಲೆ ಮಾಡಿ ಪೊಲೀಸ್ ಬಂಧನದಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಲು ಕೆಸಿಎನ್ ಅವರೂ ಇಂದು ವಿಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು.
ಚಿತ್ರದ ತಾರಾಬಳಗದಲ್ಲಿ ದರ್ಶನ್, ದೀಪು, ರಂಗಾಯಣರಘು, ಲೋಹಿತಾಶ್ವ, ಅಜಯ್, ಬುಲೆಟ್ ಪ್ರಕಾಶ್, ಸಿತಾರ, ಶರತ್‌ಕುಮಾರ್, ಶರತ್ ಲೋಹಿತಾಶ್ವ, ಮುನಿ, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ. ದಿನಕರ್‌ತೂಗುದೀಪ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Challenging Star Darshan’s Sarathy is getting released in the third week of September, said its director Dinakar Toogudeepa.We shall not disappoint Darshan fans who have overwhelmingly supported our venture all these times he said.
ದರ್ಶನ್ ಚಾಲೆಂಜಿಂಗ್ ಸ್ಟಾರ್ ಕೆಸಿಎನ್ ಚಂದ್ರಶೇಖರ್ ವಿ ಹರಿಕೃಷ್ಣ ರಂಗಾಯಣ ರಘು darshan challenging star kcn chandrashekar v harikrishna rangayana raghu


Click it and Unblock the Notifications











