»   » ದರ್ಶನ್‌ರ ಹೊಸ ರಿಮೇಕ್ ಚಿತ್ರದ ವಿಶೇಷಗಳು

ದರ್ಶನ್‌ರ ಹೊಸ ರಿಮೇಕ್ ಚಿತ್ರದ ವಿಶೇಷಗಳು

Posted By:
Subscribe to Filmibeat Kannada

ಒಳ್ಳೆ ಕಮಾಯಿ ಮಾಡಿದ 'ಗಜ' ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಇಂದ್ರ'ನಾಗಿ ಬರಲಿದ್ದಾರೆ. ಇದೇ ಮೊದಲ ಬಾರಿಗೆ ಪಡ್ಡೆಗಳ ನಿದ್ದೆ ಕೆಡಿಸಲು ಎದೆ ಉಬ್ಬಿಸಿಕೊಂಡು ನಮಿತಾ ಕನ್ನಡಕ್ಕೆ ಬರುತ್ತಿದ್ದಾರೆ.

'ಗಜ' ಚಿತ್ರ ರಿಮೇಕ ಅಥವಾ ಸ್ವಮೇಕ ಎಂದು ಗುಲ್ಲೆದ್ದಿತ್ತು. ಕೆಲವರು ಇದು ತೆಲುಗಿನ 'ಭದ್ರ' ಚಿತ್ರದ ರಿಮೇಕು ಎಂದರೆ ಗಜ ಚಿತ್ರದ ನಿರ್ದೇಶಕ ಇದು ಅಪ್ಪಟ ಸ್ವಮೇಕು ಎಂದಿದ್ದರು. ಈ ರಿಮೇಕು, ಸ್ವಮೇಕಿನ ಗುದ್ದಾಟದಲ್ಲಿ ದರ್ಶನ್ ಹೈರಾಣಾಗಿದ್ದರು. ಈಗ ಸೆಟ್ಟೇರುತ್ತಿರುವ 'ಇಂದ್ರ' ತಮಿಳಿನ 'ಅರಸು' ಚಿತ್ರದ ಪಡಿಯಚ್ಚು ಎಂದು ಸ್ವತಃ ದರ್ಶನ್ ಅವರೇ ಹೇಳಿ ಮುಂದೆ ಆಗಬಹುದಾದ ಎಡವಟ್ಟುಗಳಿಗೆ ಈಗಲೇ ಅಂತ್ಯ ಹಾಡಿದ್ದಾರೆ. ಆದರೆ ತಮಿಳಿನ 'ಅರಸು' ಚಿತ್ರವನ್ನು ಯಥಾವತ್ತಾಗಿ ಭಟ್ಟಿ ಇಳಿಸದೆ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ ದರ್ಶನ್. ಇಂದ್ರ ಚಿತ್ರದಲ್ಲಿ ಅವರದು ರಾಮ ಮತ್ತು ಭೀಮನ ಅವತಾರವಂತೆ. ಇದಿಷ್ಟನ್ನು ದರ್ಶನ್ ಬೌರಿಂಗ್ ಸಂಸ್ಥೆಯಲ್ಲಿ ಇಂದ್ರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡುತ್ತಾ ಹೇಳಿದರು. ನಾನು ರಿಮೇಕ್ ವಿರೋಧಿಯಲ್ಲ ಎಂದು ಸಂಕೋಚ ಪಡದೆ ಸ್ಪಷ್ಟವಾಗಿ ಹೇಳಿದರು.

ಇಂದ್ರ ಚಿತ್ರದಲ್ಲಿ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ದರ್ಶನ ಕೊಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್. ಅವರ ಪಾತ್ರದ ಬಗ್ಗೆ ಮಾತನಾಡುತ್ತಾ, ದಕ್ಷಿಣ ಕನ್ನಡದ ತುಳು ಭಾಷೆಯಲ್ಲಿ ಮಾತನಾಡುವ ಪಾತ್ರದಲ್ಲಿ ನಟಿಸಿದ್ದೇನೆ. ಡಬ್ಬಿಂಗಿಗಾಗಿ ದೇವು ಎಂಬವರ ಸಹಾಯ ಪಡೆದು ವಾಕ್ ಶೈಲಿಯನ್ನೇ ಬದಲಾಯಿಸಿಕೊಂಡಿರುವುದಾಗಿ ಹೇಳಿದರು.

ಇಂದ್ರ ಚಿತ್ರದ ಮತ್ತೊಂದು ವಿಶೇಷ ಎಂದರೆ 25 ಅಡಿ ಎತ್ತರದಿಂದ ಧುಮುಕುಮ ಮೋಟಾರ್ ಬೈಕ್ ಸಾಹಸ ಮೈನವಿರೇಳಿಸುತ್ತದೆ. ಈ ಸಾಹಸಕ್ಕಾಗಿ ಡೂಪ್ ಕಲಾವಿದರನ್ನು ಬಳಸದೆ ಸ್ವತಃ ದರ್ಶನ್ ಅವರೇ ಸಾಹಸ ಮಾಡಿದ್ದಾರೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬಿಡುವಿಲ್ಲದ ನಟರ ಸಾಲಿನಲ್ಲಿ ದರ್ಶನ ಸಹ ಸೇರ್ಪಡೆಯಾಗಿದ್ದಾರೆ. ನಿರ್ಮಾಪಕರಾದ ಶಂಕರೇಗೌಡ, ರಮೇಶ್ ಯಾದವ್ ಮತ್ತು ಬಾಬು ರೆಡ್ಡಿ ಚಿತ್ರಗಳು ಸಾಲು ಸಾಲಾಗಿ ಮುಂದೆ ಬರಲಿವೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada