ದರ್ಶನ್ ದಂಪತಿ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಕ್ಷ..!

ದರ್ಶನ್ ಮಿತ್ರ, ಕಿರುತೆರೆಯ ಜನಪ್ರಿಯ ಕಲಾವಿದ ಸೃಜನ್ ಲೋಕೇಶ್ "ಇದು ಯಾವುದೇ ಒಂದು ನಿರ್ಧಿಷ್ಟ ವಿಷಯದ ಬಗ್ಗೆ ಕರೆದ ಪತ್ರಿಕಾಗೋಷ್ಠಿ ಅಲ್ಲ, ಭೇಟಿ, ಮಾತುಕತೆಯದಷ್ಟೇ ಉದ್ದೇಶ" ಎಂದು ಹೇಳುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು. ಪತ್ರಕರ್ತರಿಂದ ಯಾವುದೇ ಪ್ರಶ್ನೆ ಬರುವ ಮೊದಲೇ ಮೈಕ್, ಸಮಾರಂಭದ ಕೇಂದ್ರಬಿಂದು ದರ್ಶನ್ ಕೈ ಸೇರಿತು.
ದರ್ಶನ್ ಹೇಳಿದ ಮಾತುಗಳಿವು... "ನನ್ನ ಅಭಿಮಾನಿಗಳಿಗೆ ನಾನು ಚಿರಋಣಿ. ಕರ್ನಾಟಕದ ಎಲ್ಲಾ ಜನರಲ್ಲಿ ನಾನು ಕ್ಷಮೆ ಕೇಳ್ತೀನಿ, ಈ ಒಂದು ಕಹಿ ಘಟನೆ ನಡೆಯಬಾರದಿತ್ತು, ನಡೆದೋಯ್ತು! ಇನ್ನು ಮುಂದೆ ಯಾವತ್ತೂ ಈ ರೀತಿ ಆಗೋದಿಲ್ಲ. ಈ ಘಟನೆಯನ್ನು ನಾವು ಮತ್ತೆ ನೆನಪು ಮಾಡಿಕೊಳ್ಳುವುದೂ ಇಲ್ಲ.
ನಿಜವಾಗಿಯೂ ನನಗೆ ಇಷ್ಟು ಜನ ಅಭಿಮಾನಿಗಳು ಇದ್ದಾರೆ ಅಂತ ಗೊತ್ತಿರಲಿಲ್ಲ. ಯಾವುದೇ ವ್ಯಕ್ತಿ ಬದುಕಿದ್ದಾಗಲೇ ಇಷ್ಟೊಂದು ಅಭಿಮಾನ ವ್ಯಕ್ತವಾಗೋದಿಲ್ಲ. ನನಗೆ ಈ ಭಾಗ್ಯ ಸಿಕ್ಕಿದೆ. ಅದಕ್ಕಾಗಿ ಎಲ್ಲರಿಗೂ ಜೀವನ ಪೂರ್ತಿ ಚಿರಋಣಿಯಾಗಿರ್ತೀನಿ. ನನಗೆ ಮಾಧ್ಯಮದವರೆಲ್ಲಾ ತುಂಬಾ ಸಪೋರ್ಟ್ ಮಾಡಿದೀರ, ಥ್ಯಾಂಕ್ಸ್..."
ವಿಜಯಲಕ್ಷ್ಮಿ ಕೈಲಿ ಮೈಕ್: ಇಷ್ಟು ದರ್ಶನ್ ಹೇಳಿದ ನಂತರ ಮೈಕ್, ಪಕ್ಕದಲ್ಲೇ ಇದ್ದ ಪತ್ನಿ ವಿಜಯಲಕ್ಷ್ಮಿಯವರ ಕೈಗೆ ವರ್ಗಾವಣೆಯಾಯಿತು. ಅವರ ಮಾತುಗಳು ಹೀಗಿದ್ದವು... "ಈಗ ನಮ್ಮ ಭಾಂದವ್ಯ ಇನ್ನೂ ಗಟ್ಟಿಯಾಗಿದೆ. ನಾನು, ನನ್ನ ಗಂಡ, ನನ್ನ ಮಗ, ಮುಂದೆ ಚೆನ್ನಾಗಿ ಬದುಕ್ತೀವಿ. ನಮಗೆ ಎಲ್ಲರ ಸಪೋರ್ಟ್, ಆಶೀರ್ವಾದ ಬೇಕು"
ಮತ್ತೆ ಮೈಕ್ ಸೃಜನ್ ಕೈ ಸೇರಿತು. ದಂಪತಿಗಳು ಇನ್ನು ಮುಂದೆ ಅವರು ಹೇಳಿದ ಹಾಗೇ ಚೆನ್ನಾಗಿರ್ತಾರೆ ಎನ್ನುತ್ತಿದ್ದಂತೆ ಪತ್ರಕರ್ತರ ಕಡೆಯಿಂದ ದರ್ಶನ್ ಗೆ ಎದುರಾದ ಪ್ರಶ್ನೆ- "ನಿಮ್ಮಿಂದ ನಿರ್ಮಾಪಕರಿಗೆ ತೊಂದರೆ ಆಗಿಲ್ಲವೇ?"
ಅದಕ್ಕೆ ಶಾಂತವಾಗಿ ಉತ್ತರ ಕೊಟ್ಟರು ದರ್ಶನ್ "ಇಲ್ಲ, ಯಾರೂ ತೊಂದರೆ ಆಯಿತೆಂದು ಹೇಳಿಲ್ಲ, ಬೇಸರ ಮಾಡಿಕೊಂಡಿಲ್ಲ. ಎಲ್ಲರೂ ಸಹಕಾರ ನೀಡಿದ್ದಾರೆ. ನಾನು ನಿರ್ಮಾಪಕರಿಗೆ, ಸ್ನೇಹಿತರಿಗೆ, ಚಿತ್ರರಂಗದ ಎಲ್ಲಾ ಕಲಾವಿದರಿಗೆ, ಎಲ್ಲರಿಗೂ ತುಂಬಾ... ತುಂಬಾ... ತಂಬಾ ಚಿರಋಣಿ" ಎನ್ನುತ್ತಾ ಮೈಕ್ ವಿಜಯಲಕ್ಷ್ಮಿಗೆ ಹಸ್ತಾಂತರಿಸಿದರು.
"ನಾನು ಈ ಸಂದರ್ಭದಲ್ಲಿ ಸ್ನೇಹಿತೆ ವಿದ್ಯಾ ಮತ್ತು ಅವರ ಕುಟುಂಬದವರಲ್ಲಿ ಕ್ಷಮೆ ಕೇಳ್ತೀನಿ. ನಮ್ಮಿಂದ ಅವರಿಗೆ ತೊಂದರೆಯಾಗಿದೆ" ಅಂದ್ರು ವಿಜಯಲಕ್ಷ್ಮಿ.
ಮುಂದೆ ಏನೆಂದರು ನೋಡಿ, ಮುಂದಿನ ಪುಟದಲ್ಲಿ...


Click it and Unblock the Notifications











