»   » ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಟ್ಟ ಷರತ್ತುಗಳ ಪಟ್ಟಿ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಟ್ಟ ಷರತ್ತುಗಳ ಪಟ್ಟಿ

Posted By:
Subscribe to Filmibeat Kannada
Actor Darshan
ದರ್ಶನ್ ಅವರಿಂದ ಹಲ್ಲೆಗೆ ಒಳಗಾಗಿರುವ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಂಧಾನಕ್ಕೆ ಒಪ್ಪಿದ್ದು ಪ್ರಮುಖ ನಾಲ್ಕು ಷರತ್ತುಗಳನ್ನು ದರ್ಶನ್ ಮುಂದಿಟ್ಟಿದ್ದಾರೆ. ಇವುಗಳನ್ನು ನಟ ದರ್ಶನ್ ಒಪ್ಪುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಷರತ್ತುಗಳು ಹೀಗಿವೆ.

ಇನ್ನು ಮುಂದೆ ದರ್ಶನ್ ಮದ್ಯ ಸೇವಿಸುವಂತಿಲ್ಲ. ರಿವಾಲ್ವರ್ ಹಿಡಿಯುವಂತಿಲ್ಲ ಎಂಬ ಎರಡು ಪ್ರಮುಖ ಷರತ್ತುಗಳ ಜೊತೆಗೆ ಇನ್ನೂ ಎರಡು ಷರತ್ತುಗಳು ಇವೆ. ಅವು ಏನೆಂದರೆ, ಇನ್ನು ಮುಂದೆ ಯಾವತ್ತೂ ತಮ್ಮ ಮೇಲೆ ಹಲ್ಲೆ ನಡೆಸಬಾರದು. ತಾಯಿಯ ಮನೆಗೆ ಹೋಗಲು ಅವಕಾಶ ನೀಡಬೇಕು ಎಂಬುದು ಅವರ ಷರತ್ತುಗಳು.

ಆದರೆ ವಿಜಯಲಕ್ಷ್ಮಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಟಿ ನಿಕಿತಾ ಜೊತೆಗೆ ತನ್ನ ಗಂಡ ಸಲುಗೆಯಿಂದ ಇದ್ದ. ಬಸವನಗುಡಿಯಲಿದ್ದಾಗ ಪಕ್ಕದ ಮನೆಯವಳ ಜೊತೆ ಒಡನಾಡವಿತ್ತು ಎಂದು ತಿಳಿಸಿದ್ದರು. ಹೆಂಗೆಳೆಯರೊಂದಿಗಿನ ಷರತ್ತನ್ನು ಮಾತ್ರ ವಿಜಯಲಕ್ಷ್ಮಿ ಇಡದೆ ಇರುವುದು ಅಚ್ಚರಿಮೂಡಿಸಿದೆ. (ಏಜೆನ್ಸೀಸ್)

English summary
Actor Darshan's wife Vijayalaksmi agrees to compromise with his hubby. But she demands for few conditions which include Darshan never to drink alcohol.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada