»   » ಕಾಯ್ಕಿಣಿ ಮಾತಿನ ಲಹರಿಗೆ ದೇವದತ್ತ ಪುಳಕ

ಕಾಯ್ಕಿಣಿ ಮಾತಿನ ಲಹರಿಗೆ ದೇವದತ್ತ ಪುಳಕ

Subscribe to Filmibeat Kannada

*ಜಯಂತಿ

'ಆ ಫೋನ್ ಕಾಲ್ ನನಗೆ ಸಿಕ್ಕ ಅತಿ ದೊಡ್ಡ ಕಾಂಪ್ಲಿಮೆಂಟ್...' ನಿರ್ದೇಶಕ ದೇವದತ್ತರ ಧ್ವನಿಯಲ್ಲಿ ಖುಷಿಯಿತ್ತು, ಪುಳಕವಿತ್ತು. ಯುವ ನಿರ್ದೇಶಕನ ಈ ಖುಷಿಗೆ ಕಾರಣವಾದವರು ಕಥೆಗಾರ-ಗೀತ ರಚನೆಗಾರ ಜಯಂತ ಕಾಯ್ಕಿಣಿ.

'ಸೈಕೋ' ಸಿನಿಮಾ ನೋಡಿದ ಮೇಲೆ ಜಯಂತ್ ಕಾಯ್ಕಿಣಿ ದೇವದತ್ತರಿಗೆ ಕರೆ ಮಾಡಿದ್ದಾರೆ. ಅವರು ಹೇಳಿರುವುದಿಷ್ಟು.'ನೀವು ಒಳ್ಳೆಯ ಸಿನಿಮಾ ಮಾಡಿದ್ದೀರಿ. ಇತರರನ್ನು ಅನುಸರಿಸದೆ ಬೇರೆ ದಾರಿಯಲ್ಲಿ ನಡೆದಿದ್ದೀರಿ. ತಾಂತ್ರಿಕವಾಗಿ ಎಲ್ಲ ಸಾಧ್ಯತೆಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೀರಿ. ಇನ್ನು ಮುಂದೆಯೂ ನಿಮ್ಮದೇ ಧಾಟಿಯ ಸಿನಿಮಾಗಳನ್ನು ಮಾಡಿ. ಒಂದು ಸಿನಿಮಾ ಗೆದ್ದರೆ ಹತ್ತಾರು ಅವಕಾಶ ಸಿಗುತ್ತವೆ. ಆದರೆ, ನೀವು ದುಡ್ಡಿನ ಹಿಂದೆ ಬೀಳಬೇಡಿ'. ಜಯಂತರ ಈ ಮೆಚ್ಚುಗೆ ಹಾಗೂ ಹಿತನುಡಿಗಳನ್ನು ಕೇಳಿ ದೇವದತ್ತ ರೋಮಾಂಚಿತರಾಗಿದ್ದಾರೆ.

ಅಂದಹಾಗೆ, 'ಸೈಕೊ' ನಂತರ ದೇವದತ್ತರ ಹೊಸ ಸಿನಿಮಾ ಯಾವುದು? ಉತ್ತರ ದೇವದತ್ತರಿಗೂ ಗೊತ್ತಿಲ್ಲ. ನಾನು ಆತುರಗಾರನಲ್ಲ ಎನ್ನೋದು ಅವರು ಸಾವಧಾನದಿಂದ ಹೇಳುವ ಮಾತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada