ಪಾಪ ದರ್ಶನ್ ಮೇಲೆ ಗೂಬೆ ಕೂರಿಸಬೇಡಿ: ವಿಜಯ್

By Mahesh

Duniya Vijay
'ಯಾರ ಸಂಸಾರದಲ್ಲಿ ಪ್ರಾಬ್ಲಂ ಇಲ್ಲ ಹೇಳಿ. ಸುಮ್ಮನೆ ದರ್ಶನ್ ಒಬ್ಬರ ಮೇಲೆ ಗೂಬೆ ಕೂರಿಸೋದು ಬೇಡ. ದರ್ಶನ್ ಪತ್ನಿ ಹೇಳಿಕೆ ಕೇಳಿದ ನಂತರ ಸುದ್ದಿ ಪ್ರಸಾರ ಮಾಡಿ ಎಂದು ನಟ ದುನಿಯಾ ವಿಜಯ್ ಖಾಸಗಿ ಮಾಧ್ಯಮಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಸೆಲೆಬ್ರಿಟಿಗಳ ಜೀವನದಲ್ಲಿ ಏನಾದರೂ ಸಂಭವಿಸಿದರೆ ರೋಚಕವಾಗಿ ತೋರಿಸುವುದನ್ನು ಬಿಟ್ಟು ಬಿಡಿ. ಸಂಸಾರ ಸರಿಯಾಗುವುದು ಮುಖ್ಯ ಎಂದು ವಿಜಿ ಹೇಳಿದ್ದಾರೆ.

ನಂತರ ಗಾಯಿತ್ರಿ ಆಸ್ಪತ್ರೆಗೆ ತೆರಳಿದ ದುನಿಯಾ ವಿಜಯ್ ಅವರು ದರ್ಶನ್ ತೂಗದೀಪ್ ಅವರ ಪತ್ನಿವಿಜಯಲಕ್ಷ್ಮಿ ಹಾಗೂ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

'ದಯವಿಟ್ಟು ಸಂಸಾರದ ಬಿರುಕು ಸರಿಮಾಡಿಕೊಳ್ಳಿ. ಮತ್ತೆ ಈ ರೀತಿ ಆಗದಂತೆ ಎಚ್ಚರವಹಿಸಿ' ಎಂದು ದರ್ಶನ್ ಪತ್ನಿಗೆ ಕಿವಿಮಾತು ಹೇಳಿದ್ದಾರೆ. ವಿಜಯ್ ಗೆ ಹಾಸ್ಯ ನಟ ಬುಲೆಟ್ ಪ್ರಕಾಸ್, ನಾಗಕಿರಣ್ ಸಾಥ್ ನೀಡಿದ್ದರು.

ಅಭಿಮಾನಿಗಳಿಗೆ ಮನವಿ: ದರ್ಶನ್ ಬಂಧನದಿಂದ ಉದ್ರಿಕ್ತಗೊಂಡು ಗಲಾಟೆ ನಡೆಸಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ದುನಿಯಾ ವಿಜಯ್ ಮನವಿ ಮಾಡಿದ್ದಾರೆ. ಈ ನಡುವೆ ದರ್ಶನ್ ಅಭಿಮಾನಿಗಳು ವಿಜಯನಗ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದು, ದರ್ಶನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಐಪಿಸಿ ಸೆಕ್ಷನ್ 498 ಎ(ವರದಕ್ಷಿಣೆ ಕಿರುಕುಳ), 506, 307(ಮಾರಣಾಂತಿಕ ಹಲ್ಲೆ) ಆರೋಪ ಹೊತ್ತಿರುವ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಹೊಸ ವಿಷಯವೇನಲ್ಲ. ಹಿಂದೆ ಕೂಡಾ ಹಲವು ಸಾರಿ ಹಾದಿರಂಪ ಬೀದಿ ರಂಪವಾಗಿತ್ತು. ಆದರೆ, ರಕ್ಷಿತಾ ಪ್ರೇಮ್, ಶಿವರಾಜ್ ಕುಮಾರ್, ಅಂಬರೀಷ್ ಮತ್ತೊಮ್ಮೆ ಸೃಜನ್ ಲೋಕೇಶ್ ಅವರು ಬುದ್ಧಿವಾದ ಹೇಳಿ ದರ್ಶನ್ ಸಂಸಾರದ ಬಿರುಕಿಗೆ ತೇಪೆ ಹಾಕಿದ್ದರು. [ಫುಲ್ ಕವರೇಜ್]

More from Filmibeat

English summary
Actor Duniya Vijay meets fellow actor Darshan's wife Vijayalakshmi in Gayathri Nursing hospital who was admitted after being beaten up by husband Darshan. He said that such problems will be there in every bodies life. He has also requested Vijayalakshmi to patch up with Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X