»   » ಕಿಚ್ಚ ಸುದೀಪ್, ರಾಜಮೌಳಿ ಮ್ಯೂಸಿಕ್ ಮ್ಯಾಜಿಕ್ ಕೇಳಿ

ಕಿಚ್ಚ ಸುದೀಪ್, ರಾಜಮೌಳಿ ಮ್ಯೂಸಿಕ್ ಮ್ಯಾಜಿಕ್ ಕೇಳಿ

Posted By:
Subscribe to Filmibeat Kannada

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಆಡಿಯೋ ಬಿಡುಗಡೆ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳು, ಮಾರ್ಚ್ 30, 2012 ರಂದು ಬಿಡುಗಡೆಯಾಗಲಿದೆ ಆಡಿಯೋ. ರಾಜಮೌಳಿ ಚಿತ್ರವೆಂದರೆ ಇಡೀ ದಕ್ಷಿಣಭಾರತಕ್ಕೆ ಹಬ್ಬದಂತೆ. ಕನ್ನಡದ ಕಿಚ್ಚ ಸುದೀಪ್ 'ಈಗ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರುವುದರಿಂದ ಕನ್ನಡ ಸಿನಿಪ್ರೇಕ್ಷಕರಿಗೆ ಈ ಚಿತ್ರ ಮುಹೂರ್ತದಿಂದ ಹಿಡಿದು ಬಿಡುಗಡೆಯವರೆಗೂ ಕುತೂಹಲದ ಕೇಂದ್ರಬಿಂದು.

ಮಾರ್ಚ್ 30 ರಂದು ಆಡಿಯೋ ಬಿಡುಗಡೆಯಾಗಲಿರುವ ವಿಷಯವನ್ನು ಸ್ವತಃ ನಿರ್ದೇಶಕ ರಾಜಮೌಳಿಯವರೇ ದೃಢೀಕರಿಸಿದ್ದಾರೆ. ನಾನಿ ನಾಯಕರಾಗಿರುವ ಈಗ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಪೋಷಿಸಿರುವುದಷ್ಟೇ ಅಲ್ಲ, ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದಾರಂತೆ. ಸ್ವತಃ ರಾಜಮೌಳಿಯವರೇ ಸುದೀಪ್ ನಟನೆ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಟ್ವೀಟ್ ಮಾಡಿ' ಅವರು ಕೇವಲ ಕನ್ನಡಕ್ಕೆ ಮಾತ್ರ ಸೀಮಿತ ಆಗಬಾರದು, ಅವರೊಬ್ಬ ಸೂಪರ್ ಸ್ಟಾರ್' ಎಂದಿದ್ದಾರೆ.

ಈ ಚಿತ್ರದ ನಾಯಕಿಯಾಗಿ 'ದೂಕುಡು' ಚಿತ್ರದಲ್ಲಿ ತೆಲುಗು ಪ್ರಿನ್ಸ್ ಮಹೇಶ್ ಬಾಬು ಜೊತೆ ನಟಿಸಿ ಪ್ರೇಕ್ಷಕರ ಪಾಲಿನ ಅರಗಿಣಿ ಎನಿಸಿರುವ ಸಮಂತಾ ಇದ್ದಾರೆ. ಚಿತ್ರದ ಬಜೆಟ್ 20 ಕೋಟಿ ರುಪಾಯಿಗಳನ್ನು ಮೀರಿದೆ. ಎಮ್ ಎಮ್ ಕೀರವಾಣಿ ಸಂಗೀತ, ಕೆಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಹೊಂದಿದೆ. (ಏಜೆನ್ಸೀಸ್)

English summary
The music album of SS Rajamouli magnum opus Eega will be hitting the stands on March 30. the director himself has confirmed the date of the audio release

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X