ನಟ ಮಹೇಶ್ ಬಾಬು ನಿವಾಸದ ಮೇಲೆ ಐಟಿ ರೇಡ್
ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ತೆರೆಕಂಡ 'ದೂಕುಡು' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು 'ದೂಕುಡು' ಚಿತ್ರ ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದರು. ಈಗ ಆ ಚಿತ್ರದ ನಾಯಕ ನಟ ಮಹೇಶ್ ಬಾಬು ಅವರ ನಿವಾಸದ ಮೇಲೆ ಐಟಿ ರೇಡ್ ನಡೆದಿದೆ.
'ದೂಕುಡು' ಚಿತ್ರ ಯಶಸ್ವಿಯಾಗಿದ್ದೇ ತಡ ಮಹೇಶ್ ಬಾಬುಗೆ ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿವೆ. ಜಾಹೀರಾತುಗಳಲ್ಲೂ ಸಿಕ್ಕಾಪಟ್ಟೆ ಹಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹೇಶ್ ಬಾಬು ಮನೆ ಮೇಲೆ ದಾಳಿ ಮಾಡಿದ್ದಾರೆ.
ಚಿತ್ರವೊಂದಕ್ಕೆ ಮಹೇಶ್ ಬಾಬು ರು.10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೈದರಾಬಾದಿನ ಜೂಬ್ಲಿ ಹಿಲ್ಸ್‌ನಲ್ಲಿ ಗುರುವಾರದಿಂದ (ಡಿ.8) ಇಂದೂ ದಾಳಿ ಮುಂದುವರೆದಿದೆ. ಆಂಧ್ರಪ್ರದೇಶದ ಚರಿತ್ರೆಯಲ್ಲೇ ಎಲ್ಲಾ ದಾಖಲೆಗಳನ್ನು 'ದೂಕುಡು' ಚಿತ್ರ ಮುರಿದಿದೆ ಎಂದು ಆ ಚಿತ್ರದ ನಿರ್ಮಾಪಕರು ಹೇಳಿಕೊಂಡಿದ್ದರು. (ಏಜೆನ್ಸೀಸ್)
More from Filmibeat
English summary
Recently IT official raided the Dookudu film producers’ offices on basis of Dookudu movie collections stated by the film producers. Now its Mahesh Babu turn, this raid based on the Dookudu movie collections and also he is earning good money from the movies and Commercial Ads.


Click it and Unblock the Notifications











