»   » ರಮ್ಯಾ ಜೊತೆಗಾರನಿಗೆ ಹಾಡೊಂದು ಬಾಕಿ

ರಮ್ಯಾ ಜೊತೆಗಾರನಿಗೆ ಹಾಡೊಂದು ಬಾಕಿ

Subscribe to Filmibeat Kannada
Ramya in Jothegara
ಜೊತೆ ಜೊತೆಯಲಿ ಚಿತ್ರದ ಯಶಸ್ವಿ ಜೋಡಿ ರಮ್ಯಾ ಮತ್ತು ಪ್ರೇಮ್ ಈಗ ಮತ್ತೆ 'ಜೊತೆಗಾರ'ನಲ್ಲಿ ಒಂದಾಗಿದ್ದಾರೆ.'ಜೊತೆಗಾರ'ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಒಂದು ಹಾಡು ಮತ್ತು ಕೆಲವೊಂದು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.

ಚಿತ್ರ ನಿರ್ಮಾಣದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಅಶ್ವಿನಿ ಗ್ರೂಪ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಆಗಸ್ಟ್ 21ರಂದು ಸೆಟ್ಟೇರಿದ 'ಜೊತೆಗಾರ'ನ ನಿರ್ದೇಶಕ ಶಿಕಾಮಣಿ ಅವರಿಗೆ ಚೊಚ್ಚಲ ಚಿತ್ರ. ಸಂಗೀತ ಸಂಯೋಜಕ ಸುದೀಪ್ ಶೆಟ್ಟಿ ಅವರಿಗೂ ಅಷ್ಟೆ ಇದು ಮೊದಲ ಚಿತ್ರ.ಜೊತೆಗಾರನ ಧ್ವನಿಸುರುಳಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಜೊತೆಗಾರನಿಗೆ ವಿಭಿನ್ನವಾಗಿ ಪ್ರಚಾರ ಕೊಡಬೇಕೆಂದು ನಿರ್ಮಾಪಕರಾದ ಅಶ್ವಿನಿ ರಾಮ್ ಪ್ರಸಾದ್ ಮತ್ತು ಅವರ ಸಹೋದರ ಕೃಷ್ಣ ಪ್ರಸಾದ್ ಯೋಜಿಸಿದ್ದಾರೆ. ನಗರದ ಹೊರವಲಯದಲ್ಲಿ ಬೃಹತ್ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಜೊತೆಗಾರನಿಗೆ ಪ್ರಚಾರ ಕೊಡುವ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ. ತಮ್ಮ ಒಡೆತನದ ಅಶ್ವಿನಿ ರೆಕಾರ್ಡಿಂಗ್ ಸ್ಟುಡಿಯೊ ಮೂಲಕ ನಿರ್ಮಾಣ ನಂತರ ಕಾರ್ಯಗಳಲ್ಲಿ ಸಹೋದರರು ಬ್ಯುಸಿಯಾಗಿದ್ದಾರೆ. ಚಿತ್ರದ ತಾರಾಗಣದಲ್ಲಿ ಆಶೀಶ್ ವಿದ್ಯಾರ್ಥಿ, ಲಕ್ಷ್ಮಿ, ರಾಜೇಂದ್ರ ಕಾರಂತ್, ಸಾಧು ಕೋಕಿಲ, ದೊಡ್ಡಣ್ಣ, ಪದ್ಮಜಾ ರಾವ್, ಸುಧಾ ಬೆಳವಡಿ, ಪ್ರತಾಪ್, ಸುನಿಲ್, ಲಯೇಂದ್ರ ಮುಂತಾದವರು ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada