twitter
    For Quick Alerts
    ALLOW NOTIFICATIONS  
    For Daily Alerts

    ಕನಸೆಂಬ ಕುದುರೆಯನೇರಿ ವಿಶೇಷ ಪ್ರದರ್ಶನಕ್ಕೆ ಬನ್ನಿ

    By Mahesh
    |

    ಸದಭಿರುಚಿ ಚಲನಚಿತ್ರಗಳನ್ನು ಪ್ರದರ್ಶಿಸಿ, ಚಿತ್ರತಂಡದೊಡನೆ ಆರೋಗ್ಯಕರ ಸಂವಾದ ನಡೆಸಿಕೊಂಡು ಬರುತ್ತಿರುವ ಅವಿರತ ಪ್ರತಿಷ್ಠಾನವು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ "ಕನಸೆಂಬ ಕುದುರೆಯನೇರಿ" ಚಿತ್ರದ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಕೆ.ಎಚ್ ಕಲಾಸೌಧದಲ್ಲಿ ಏರ್ಪಡಿಸಿದೆ.

    ಅವಿರತ ಹಾಗೂ ವಿಪ್ರೊ ಕನ್ನಡ ಬಳಗದ ಸಹಯೋಗದೊಂದಿಗೆ ನಡೆಯುತ್ತಿರುವ ಈ ಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಗಿರೀಶ್ ಕಾಸರವಳ್ಳಿ, ವೈಜನಾಥ ಬಿರಾದರ, ಪವಿತ್ರ ಲೋಕೇಶ್, ಸದಾಶಿವ ಬ್ರಹ್ಮಾವರ್ ಮತ್ತಿತ್ತರರು ಪಾಲ್ಗೊಳ್ಳಲಿದ್ದಾರೆ. 2010ನೇ ಸಾಲಿನ ರೋಮ್ ನ ಏಷ್ಯಾಲಿಕಾ ಚಿತ್ರೋತ್ಸವ, ಶ್ರೇಷ್ಠ ಏಷ್ಯನ್ ಚಿತ್ರ NETPAC ಅವಾರ್ಡ್ ಈ ಚಿತ್ರಕ್ಕೆ ಸಂದಿದೆ.

    ಸ್ಥಳ: ಕೆ.ಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
    ದಿನಾಂಕ/ದಿನ: ಮಾರ್ಚ್ 13, ಭಾನುವಾರ
    ಸಮಯ: ಮಧ್ಯಾಹ್ನ 3.30ಕ್ಕೆ
    ಟಿಕೆಟ್ ಬೆಲೆ : 100 ರು.
    ಸಂಪರ್ಕಿಸಿ: 98800 86300

    ಅವಿರತ ತಂಡದ 40ನೇ ಚಿತ್ರ ಪ್ರದರ್ಶನ ಇದಾಗಿದ್ದು, ವಿಜಯ್ ಹನಕೆರೆ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ವಿಶೇಷ ಪ್ರದರ್ಶನಕ್ಕೆ ಐ.ಟಿ. ಕನ್ನಡಿಗರ ಕೂಟ, ಬೆಂಗಳೂರು ಎಕ್ಸ್ ಪೊ, ವಟಿ ಕುಟೀರ ಮುಂತಾದ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದೆ.

    'ಕನಸೆಂಬ ಕುದುರೆಯನೇರಿ' ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ ಚಿತ್ರ. 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಬಸಂತ್ ಕುಮಾರ್ ಪಾಟೀಲ ನಿರ್ಮಾಣದ ಈ ಚಿತ್ರದಲ್ಲಿ ವೈಜಯಂತ್ ಬಿರಾದರ್ ಹಾಗೂ ಉಮಾಶ್ರೀ ಮುಖ್ಯಭೂಮಿಕೆಯಲ್ಲಿದ್ದಾರೆ.

    English summary
    Aviratha and Wipro Kannaad Balaga IT groups have organised
 Kanasemba Kudureyaneri Movie Show and Debate session with Director Girish Kasaravalli, actress Pavitra Lokesh and movie crew at KH Kala Soudha, Hanumantha Nagar, Bangalore on Mar.13. Movie Show supported by Vati Kutira, Bangalore Expo groups.
    Wednesday, March 9, 2011, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X