»   » ಕನ್ನಡ ನಟಿ ಹರಿಪ್ರಿಯಾಗೆ ಕೈತುಂಬಾ ಅವಕಾಶ

ಕನ್ನಡ ನಟಿ ಹರಿಪ್ರಿಯಾಗೆ ಕೈತುಂಬಾ ಅವಕಾಶ

Posted By:
Subscribe to Filmibeat Kannada
<ul id="pagination-digg"><li class="next"><a href="/news/09-actress-haripriya-malayalam-movie-release-aid0172.html">Next »</a></li></ul>
Haripriya
ತುಳು ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಹರಿಪ್ರಿಯಾ ನಂತರ ಕನ್ನಡ ಚಿತ್ರರಂಗದಲ್ಲಿ ಸುದ್ದಿಯಾದರು. ಆದರೆ, ಆರಂಭದ ದಿನಗಳಲ್ಲಿ ಅವರು ಕೇವಲ ಸೌಂದರ್ಯ ಹಾಗೂ ಗಾಸಿಪ್ ಗಳಲ್ಲೇ ಮಿಂಚಿದ್ದು ಹೆಚ್ಚು. ನಟಿಸಿದ ಚಿತ್ರಗಳಾವವೂ ಹಿಟ್ ಆಗಿರಲೇ ಇಲ್ಲ. ನಂತರ ಹರಿಪ್ರಿಯಾ ನೆರೆಭಾಷೆಯ ಚಿತ್ರರಂಗದತ್ತ ತೆರಳಿ ಇದೀಗ ಅಲ್ಲಿ ಯಶಸ್ವಿಯೂ ಆಗಿದ್ದಾರೆ.

ಈಗ ಕಾಲ ಬದಲಾಗಿದೆ. ಹರಿಪ್ರಿಯಾ ಅದೆಷ್ಟು ಬ್ಯುಸಿಯಾಗಿದ್ದಾರೆ ಎಂದರೆ ಅವರಿಗೆ ಈಗ ಮೊಬೈಲ್ ಎತ್ತಲೂ ವೇಳೆಯಿಲ್ಲ. ಅವರೀಗ ಚತುರ್ಭಾಷಾ ತಾರೆ. ತೆಲುಗು, ತಮಿಳು ಚಿತ್ರಗಳನ್ನು ಪೂರೈಸಿದ ನಂತರ ಮಲೆಯಾಳಂ ಚಿತ್ರರಂಗದಲ್ಲಿ ಕೂಡ ಮಿಂಚುತ್ತಿದ್ದಾರೆ. ಅಲ್ಲಿ ಜಯರಾಮ್ ನಾಯಕನಾಗಿರುವ 'ತಿರುವಾಂಬಡಿ ತಂಬನ್' ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ಇದು ಏಪ್ರಿಲ್ 14, 2102 ರಂದು ಬಿಡುಗಡೆಯಾಗಲಿದೆ.

ಹರಿಪ್ರಿಯಾ ಮೊದಲ ನಟಿಸಿದ್ದು ತುಳು. ನಂತರ ಕನ್ನಡ, ತಮಿಳು, ತೆಲುಗು, ಈಗ ಮಲಯಾಳಂ. ಅಂದರೆ ಒಟ್ಟು ಐದು ಭಾಷೆಗಳ ಚಿತ್ರಗಳನ್ನು ಮುಗಿಸಿದ್ದಾರೆ. ಈಗ ದಕ್ಷಿಣ ಭಾರತದ ಪ್ರಮುಖ ನಾಲ್ಕು ಚಿತ್ರರಂಗಗಳಲ್ಲಿ ಹರಿಪ್ರಿಯಾಗೆ ಭಾರೀ ಡಿಮ್ಯಾಂಡು. ಮುಖ್ಯವಾಹಿನಿಯ ನಿರ್ಮಾಣ ಸಂಸ್ಥೆಗಳೇ ಸಂಪರ್ಕಿಸಿ ಹರಿಪ್ರಿಯಾ ಕಾಲ್ ಸೀಟ್ ಗೆ ಮುಗಿಬಿದ್ದಿದ್ದಾರೆ. ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/09-actress-haripriya-malayalam-movie-release-aid0172.html">Next »</a></li></ul>

English summary
Kannada Actress Haripriya is Shining in Five Languages now. Her Malayalam movie Thiruvambadi Tamban is to release on 14 April 2012.&#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X