For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿಯಲ್ಲಿ ನಿಮ್ಮ ಕಣ್ಣ ಮುಂದೆ ರಾಧಿಕಾ ಲಕ್ಕಿ

  By Rajendra
  |

  ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ ಯಶ್ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಮುಖ್ಯಭೂಮಿಕೆಯಲ್ಲಿರುವ ಲಕ್ಕಿ ಚಿತ್ರ ಫೆ.24ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು
  ಡಾ.ಸೂರಿ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದ್ದು ಅವರ ಮಟ್ಟುಗಳು ಚಿತ್ರದ ಪ್ರಮುಖ ಆಕರ್ಷಣೆ ಎನ್ನಲಾಗಿದೆ.

  ಲಕ್ಕಿ ಚಿತ್ರದ ಮತ್ತೊಂದು ಆಕರ್ಷಣೆ ಪಗ್ ನಾಯಿಮರಿ. ಚಿತ್ರದಲ್ಲಿ ಪಗ್ ಪ್ರಮುಖ ಪಾತ್ರವಹಿಸಿದೆ. ಲಕ್ಕಿ ಚಿತ್ರ ರಾಜ್ಯದಾದ್ಯಂತೆ 60 ರಿಂದ 70 ಕೇಂದ್ರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇನ್ನು ನಿರ್ಮಾಪಕಿಯಾಗಿ ರಾಧಿಕಾ ದಿ ಬೆಸ್ಟ್. ಚಿತ್ರನಿರ್ಮಾಣದ ಸಮಸ್ಯೆಗಳ ಅರಿವು ಅವರಿಗೆ ಚೆನ್ನಾಗಿದೆ. ನಿರ್ದೇಶಕರು ಕೇಳಿದ ಯಾವುದಕ್ಕೂ ಇಲ್ಲ ಇನ್ನದೇ ಬೆಂಬಲ ನೀಡಿದ್ದಾರೆ ಎಂದಿದ್ದಾರೆ ರಮ್ಯಾ.

  ಇನ್ನು ರಮ್ಯಾ ಮತ್ತು ಯಶ್ ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿಯೂ ಚೆನ್ನಾಗಿದೆಯಂತೆ. ಪರಸ್ಪರ ಒಬ್ಬರನೊಬ್ಬರು ಸಿಕ್ಕಾಪಟ್ಟೆ ಹೊಗಳಿಕೊಂಡಿದ್ದಾರೆ. ಕಾದು ನೋಡೋಣ ಲಕ್ಕಿ ಚಿತ್ರದ ಲಕ್ಕು ಹೇಗಿದೆ ಅಂತ. (ಒನ್ ಇಂಡಿಯಾ ಕನ್ನಡ)

  English summary
  Golden girl Ramya and Yash lead movie Lucky is all set to release on February 24. The movie is being produced by Radhika Kumaraswamy and directed by Dr. Suri. Arjun Janya has composed the music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X