»   »  ಮೈಸೂರು ಸುತ್ತಮುತ್ತ ಕರಿ ಚಿರತೆ ಹಾವಳಿ

ಮೈಸೂರು ಸುತ್ತಮುತ್ತ ಕರಿ ಚಿರತೆ ಹಾವಳಿ

Subscribe to Filmibeat Kannada

ಗಜ ನಿರ್ದೇಶಕ ಮಾದೇಶ್ ಅವರು ಈಗ ಚಿರತೆಯ ಬೇಟೆಯಲ್ಲಿ ನಿರತರಾಗಿದ್ದಾರೆ. ಮಾದೇಶ್ ನಿರ್ದೇಶನದಲ್ಲಿ ವಿಜಯ್ ನಾಯಕನಾಗಿ ನಟಿಸುತ್ತಿರುವ 'ಕರಿಚಿರತೆ' ಚಿತ್ರಕ್ಕೆ ಮೈಸೂರು ಸುತ್ತ ಮುತ್ತ 25 ದಿನಗಳ ಕಾಲ ಎರಡು ಹಾಡು ಎರಡು ಫೈಟ್ಸ್ ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಿಕೊಂಡು ಬಂದಿದ್ದು ಡಿಸೆಂಬರ್‌ನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ಮಾಪಕರಲ್ಲೊಬ್ಬರಾದ ಮೋಹನ್ ತಿಳಿಸಿದ್ದಾರೆ.

ಹಿಂದೆ ಪ್ರೀತ್ಸೆ ಪ್ರೀತ್ಸೆ ಚಿತ್ರ ನಿರ್ಮಿಸಿದ್ದ ಕೃಷ್ಣಯ್ಯ ಹಾಗೂ ಮೋಹನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಯಕ ವಿಜಯ್ ಈ ಚಿತ್ರದಲ್ಲಿ ಗ್ಯಾರೇಜ್ ಒಂದರ ಮಾಲೀಕನಾಗಿದ್ದು ಸುಧಾ ಬೆಳವಾಡಿ ತಾಯಿ ಪಾತ್ರ ನಿರ್ವಹಿಸಿದ್ದಾರೆ. ಮೈಸೂರು ಸುತ್ತಮುತ್ತ ಅರಮನೆ, ಇಲವಾಲ, ನಂಜನಗೂಡು, ಕಳಲೆ ದೇವಸ್ಥಾನ, ಮಾದೇಶ್ವರ ಬೆಟ್ಟ ಮುಂತಾದ ಕಡೆಗಳಲ್ಲಿ ನಿರಂತರ ಚಿತ್ರೀಕರಣ ನಡೆದಿದೆ.

ಈಗಾಗಲೇ ಶೇಕಡ 50 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಸಾಧುಕೋಕಿಲರ ಸಂಗೀತ ಸಂಯೋಜನೆ ಮಾಸ್‌ಮಾದರ ಸಾಹಸ ಸಂಯೋಜನೆ ಇದ್ದು ಶರ್ಮಿಳಾ ಮಾಂಡ್ರೆ, ಯಜ್ಞ ಶೆಟ್ಟಿ, ಜೈಜಗದೀಶ್, ಸಂಗೀತ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada