twitter
    For Quick Alerts
    ALLOW NOTIFICATIONS  
    For Daily Alerts

    ಅಂದುಕೊಂಡ ಹಾಗೆ ಇರಲ್ಲ ಖುಷಿ ಕೊಡುತ್ತೆ, ಕಾಫಿ ಶಾಪ್

    By Rajendra
    |

    ಗೀತಾ ಕೃಷ್ಣ ನಿರ್ದೇಶನದ ತ್ರಿಭಾಷಾ ಚಿತ್ರ 'ಕಾಫಿ ಶಾಫ್' ಕಡೆಗೂ ಸಿದ್ಧವಾಗಿದೆ. ಸೆನ್ಸಾರ್‌ನಲ್ಲಿ ಪಾಸಾಗಿರುವ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈ ಚಿತ್ರಕ್ಕೆ ತೆಲುಗಿನಲ್ಲಿ 'ಕಾಫಿ ಹೌಸ್' ಹಾಗೂ ತಮಿಳಿನಲ್ಲಿ 'ನಿಮಿಡಂಗಲ್' ಎಂದು ಹೆಸರಿಡಲಾಗಿದೆ. ಮಾರ್ಚ್ 18ರಂದು ಈ ಚಿತ್ರ ಬಿಡುಗಡೆ ಭಾಗ್ಯ ಕಾಣಲಿದೆ.

    ಚಿತ್ರದ ತಾರಾಗಣದಲ್ಲಿ ಶಶಾಂಕ್ ಮತ್ತು ಬಿಯಾಂಕಾ ದೇಸಾಯಿ ಜೊತೆಗೆ ಅತುಲ್ ಕುಲಕರ್ಣಿ, ಗಿರೀಶ್ ಕಾರ್ನಾಡ್ ಪ್ರಮುಖ ಅಭಿನಯಿಸಿದ್ದಾರೆ. ಮಾರ್ಚ್ 11ಕ್ಕೆ ಚಿತ್ರವನ್ನು ತೆರೆಗೆ ತರಲು ಗೀತಾ ಕೃಷ್ಣ ಯೋಜಿಸಿದ್ದರಂತೆ. ಆದರೆ ಸುದೀಪ್ ಅಭಿನಯದ'ಕೆಂಪೇಗೌಡ' ಬಿಡುಗಡೆಯಾಗುತ್ತಿರುವ ಕಾರಣ 'ಕಾಫಿ ಶಾಫ್'ನ್ನು ಮುಂದೂಡಿರುವುದಾಗಿ ತಿಳಿಸಿದ್ದಾರೆ.

    ಸುದೀರ್ಘ ಸಮಯದ ಬಳಿಕ ತೆರೆಕಾಣುತ್ತಿರುವ ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರೂ ಇರುವ ಕಾರಣ ಚಿತ್ರದ ಬಗ್ಗೆ ಕುತೂಹಲ ಇದ್ದೇ ಇದೆ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಬೇಬಿ ಶ್ರೇಯಾ. ತೆಲುಗು, ತಮಿಳಿನಲ್ಲೂ ಚಿತ್ರವನ್ನು ತರುತ್ತಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ. "ಅಂದುಕೊಂಡ ಹಾಗೆ ಇಲ್ಲ ಖುಷಿ ಕೊಡುತ್ತೆ" ಎಂಬುದು ಚಿತ್ರದ ಅಡಿಬರಹ.

    English summary
    Telugu star Shashank and Biyanka Desai lead multilingual movie Koffi Shop is getting released on March 18. It is also made in Telugu as Koffi House and as Nimidngal in Tamil. The movie got U/A certificate from regional censor board. Atul Kulkarni and Girish Karnad playing other important roles in the film.
    Wednesday, March 9, 2011, 14:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X