»   » ಜೆನ್ನಿಫರ್ ಜತೆ ಈ ವಾರ ಮಸ್ತ್ ಮಜಾ ಮಾಡಿ

ಜೆನ್ನಿಫರ್ ಜತೆ ಈ ವಾರ ಮಸ್ತ್ ಮಜಾ ಮಾಡಿ

Posted By:
Subscribe to Filmibeat Kannada
mast maja maadi movie set to release
ವಿನೂತನ ಪ್ರಚಾರಕ್ಕೆ ಹೆಸರಾದ ಸೌಂದರ್ಯ ನಮನ ಕ್ರಿಯೇಷನ್ಸ್ ಅವರ ಪ್ರಥಮ ಚಿತ್ರ ಮಸ್ತ್ ಮಜಾ ಮಾಡಿ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದ್ದೂರಿ ತಾರಾಗಣ, ಸುಂದರ ಹೊರಾಂಗಣ ಹಾಗೂ ಉತ್ತಮ ಗೀತೆಗಳನ್ನೊಳಗೊಂಡ ಈ ಚಿತ್ರ ಶ್ರೀಮಂತಿಕೆಯಿಂದ ಮೂಡಿಬಂದಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಹಿಂದಿ ಚಿತ್ರದ ರಿಮೇಕ್ ಆದರೂ ವಾರಾಂತ್ಯದಲ್ಲಿ ಒಮ್ಮೆ ನೋಡಿ, ನಕ್ಕು ನಲಿಯಲು ಅಡ್ಡಿಯಿಲ್ಲ ಎನ್ನುತ್ತಾರೆ ಗಾಂಧಿನಗರದ ಮಂದಿ.

ಚಿತ್ರ ಉತ್ತಮವಾಗಿ ಬರಲು ನಿರ್ಮಾಪಕರ ಸಹಕಾರ ಅಗತ್ಯ. ಚಿತ್ರದ ಸಿರಿವಂತಿಕೆಗೆ ಯಾವುದೇ ಲೋಪವಾಗದಂತೆ ಹಣ ವ್ಯಯಿಸಿದ್ದಾರೆ ನಿರ್ಮಾಪಕ ಜಗದೀಶ್. ಸುದೀಪ್, ಕೋಮಲ್. ವಿಜಯರಾಘವೇಂದ್ರ, ದಿಗಂತ್ ಹಾಗೂ ನಾಗಕಿರಣ್ ಜೊತೆ ಏಕನಾಯಕಿಯಾಗಿ ಜೆನ್ನಿಫ಼ರ್ ಕೊತ್ವಾಲ್ ಅಭಿನಯಿಸಿದ್ದಾರೆ. ಸೂಪರ್‌ಸ್ಟಾರ್ ಉಪೇಂದ್ರ ಬಹು ನಾಯಕಿಯರೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿರುವುದು ಚಿತ್ರದ ಅದ್ದೂರಿತನಕ್ಕೆ ಕನ್ನಡಿ ಹಿಡಿದಂತಿದೆ. ಬಾಲಾಜಿ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಚಿತ್ರದ ಜಾಹಿರಾತನ್ನು ಹೊತ್ತ ಐದು ನಗರ ಸಾರಿಗೆ ಬಸ್ಸುಗಳು ಪ್ರಮುಖ ಬಡಾವಣೆಗಳಲ್ಲಿ ಚಲಿಸಿ ನಾಗರಿಕರ ಮನದಲ್ಲಿ ಮಸ್ತ್ ಮಜಾ ಮಾಡಿ ನೆಲೆಯೂರಲು ಸಹಕಾರಿಯಾಗಿದೆ. ಅನಂತರಾಜು ನಿರ್ದೇಶಿಸಿರುವ ಈ ಚಿತ್ರಕ್ಕೆ ಸೌಂದರ್ಯ ನಮನ ಕ್ರಿಯೇಷನ್ಸ್ ತಂಡ ಕತೆ ರಚಿಸಿದೆ. ಕವಿರಾಜ್, ರಾಂನಾರಾಯಣ್ ಹಾಗೂ ಶ್ಯಾಂ ಬರೆದಿರುವ ಗೀತೆಗಳಿಗೆ ಬಾಲಾಜಿ ಸಂಗೀತ ಸಂಯೋಜಿಸಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ತಿರುಪತಿ ರೆಡ್ಡಿ ಸಂಕಲನ, ತ್ರಿಭುವನ್ ನೃತ್ಯ, ರವಿವರ್ಮ ಸಾಹಸ, ರಾಮು, ಪಾಪಣ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ರಂಗಾಯಣರಘು, ಸಿಹಿಕಹಿಚಂದ್ರು ಮುಂತಾದವರಿದ್ದಾರೆ.
ಪೂರಕ ಓದಿಗೆ:
12 ಮಂದಿ ನಟಿಯರೊಂದಿಗೆ ಉಪೇಂದ್ರ
ಪಂಚನಾಯಕರ ಮುದ್ದಿನ ನಾಯಕಿಯಾಗಿ ಜನ್ನಿಫರ್
ವಿದೇಶದಲ್ಲಿ ನಾಲ್ವರು ನಾಯಕರ ಮಸ್ತ್ ಮಜಾ ಮಾಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada