ಕನ್ನಡಕ್ಕೆ ಬಾಲಿವುಡ್ ಬಿಚ್ಚಮ್ಮ ಮಿನೀಷಾ ಲಂಬ

By Rajendra

ಬಾಲಿವುಡ್ ತಾರೆ ಮಿನಿಷಾ ಲಂಬ ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಜೊತೆ ಮಿನೀಷಾ ಅಭಿನಯಿಸಲಿದ್ದಾರೆ. ಚಿತ್ರದ ಹೆಸರು 'ಕಾಂಟ್ರಾಕ್ಟ್'. ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ ಪತ್ನಿಯಾಗಿ ಮಿನೀಷಾ ಕಾಣಿಸಲಿದ್ದಾರೆ.

ಬಾಲಿವುಡ್‌ 'ಬಿಚ್ಚಮ್ಮ'ನಾಗಿಯೇ ಪ್ರಚಾರ ಪಡೆದ ಮಿನೀಷಾ ಕನ್ನಡಕ್ಕೆ ಗೌರಮ್ಮನಾಗಿ ಎಂಟ್ರಿ ಕೊಡುತ್ತಿರುವುದು ವಿಶೇಷ.'ಕಾಂಟ್ರಾಕ್ಟ್' ಚಿತ್ರದಲ್ಲಿ ಮಿನೀಷಾ ಹಾಟ್ ದೃಶ್ಯಗಳಲ್ಲಿ ಕಾಣಿಸುತ್ತಿಲ್ಲ. ಬದಲಾಗಿ ಮೈತುಂಬ ಸೀರೆಯುಟ್ಟ ಗೌರಮ್ಮನಾಗಿ ದರ್ಶನ ನೀಡಲಿದ್ದಾರೆ.

ಇದು ಪಡ್ಡೆಗಳಿಗೆ ಒಂಚೂರು ನಿರಾಸೆ ತರುವ ವಿಷಯವಾದರೂ ಅಭಿನಯಕ್ಕೆ ಒತ್ತು ನೀಡುವ ಪಾತ್ರವಂತೆ. ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ 'ಕಾಂಟ್ರಾಕ್ಟ್' ಚಿತ್ರದ ಮುಹೂರ್ತ ನೆರವೇರಿತು. ಕಡು ನೀಲಿ ಬಣ್ಣದ ಸೀರೆಯುಟ್ಟಿದ್ದ ಮಿನೀಷಾ ಒಂದು ನಿಮಿಷ ಸೀರೆ ಬಗ್ಗೆಯೂ ಸ್ಪೀಚ್ ಕೊಟ್ಟರು.

ಅವರು ಹೇಳಿದ್ದೇನೆಂದರೆ, ಸೀರೆಯಲ್ಲಿ ಮಹಿಳೆಯರ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ. ಸೀರೆ ಭಾರತೀಯ ನಾರಿಯ ಮೆಚ್ಚಿನ ಉಡುಗೆ ಎಂದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಅರ್ಜುನ್ ಸರ್ಜಾ ಹಾಗೂ ಜೆ ಡಿ ಚಕ್ರವರ್ತಿ(ಇವರು ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ) ಅವರ ಕರೆಗೆ ಓಗೊಟ್ಟು ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದರು.

ಹಿಂದಿಯ 'ಕಿಡ್ನಾಪ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಮಿನೀಷಾ ಬಳಿಕ 'ಬಚನಾ ಹಸೀನೊ', 'ದಸ್ ಕಹಾನಿಯಾ', 'ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್'ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಕಾಂಟ್ರಾಕ್ಟ್' ಚಿತ್ರಕ್ಕಾಗಿ ಬೆಂಗಳೂರಿನಲ್ಲಿ ಹತ್ತು ದಿನಗಳ ಕಾಲ ನೆಲೆಸಲಿದ್ದಾರೆ ಮಿನಿಷಾ. ಇದುವರೆಗೂ ನನ್ನ ವೃತ್ತಿ ಜೀವನದಲ್ಲಿ ಮಾಡಿರದಂತಹ ಪಾತ್ರವನ್ನು ಅರ್ಜುನ್ ಜೊತೆ ಮಾಡುತ್ತಿದ್ದೇನೆ.ಹೆಂಡ್ತಿ ಎಂದರೆ ಹೀಗಿರಬೇಕು ಅನ್ನುವಂತಹ ಪಾತ್ರವದು ಎಂದಿದ್ದಾರೆ ಮಿನೀಷಾ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X