ನೈಜ ಕತೆಯಾಧಾರಿತ ಜೇಡರಹಳ್ಳಿ ರೆಡಿ ಫಾರ್ ರಿಲೀಸ್

By Rajendra

Jedarahalli Movie release
ರೌಡಿಗಳ ನೈಜ ಜೀವನ ಕತೆಯಾಧಾರಿತ ಕೆಲವು ಚಿತ್ರಗಳು ಕನ್ನಡದಲ್ಲಿ ಈಗಾಗಲೆ ಮೂಡಿಬಂದಿವೆ. ಆ ಚಿತ್ರಗಳು ಯಶಸ್ವಿಯೂ ಆಗಿವೆ. ಆ ದಿನಗಳು, ಕರಿಯ, ಡೆಡ್ಲಿ ಸೋಮ ಚಿತ್ರಗಳನ್ನು ಹೆಸರಿಸಬಹುದು. ಆದರೆ ರೌಡಿಯೊಬ್ಬನ ಜೀವನ ಕತೆಯಾಧಾರಿತ ಚಿತ್ರದಲ್ಲೇ ಸ್ವತಃ ಆತನೇ ಪಾತ್ರ ಪೋಷಿಸುವ ಚಿತ್ರ ಇಲ್ಲಿಯವರೆಗೂ ಬೆಳ್ಳಿ ತೆರೆಗೆ ಬಂದಿಲ್ಲ. ಅಂತಹ ಒಂದು ಪ್ರಯತ್ನವನ್ನು ಮಾಡಿದ್ದಾರೆ ಜೇಡರಹಳ್ಳಿ ಕೃಷ್ಣಪ್ಪ.

ಈ ಹಿಂದೆ ಭೂಗತಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದ ಆದರೆ ಸದ್ಯಕ್ಕೆ ಹಿಂಸೆಗೆ ಗುಡ್ ಬೈ ಹೇಳಿ ಸಮಾಜಸೇವೆಯಲ್ಲಿ ತಲ್ಲೀನರಾಗಿರುವ ಜೇಡರಹಳ್ಳಿ ಕೃಷ್ಣಪ್ಪ ಅವರ ಜೀವನ ಕತೆಯಾಧಾರಿತ ಚಿತ್ರವೇ 'ಜೇಡರಹಳ್ಳಿ'. ಈ ಚಿತ್ರಕ್ಕೆ ನಿರ್ಮಾಪಕ ಕೂಡ ಅವರೇ. ಈ ಚಿತ್ರದ ಶೂಟಿಂಗ್ ಮುಗಿದಿದ್ದು ಇನ್ನೇನು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

ಇತ್ತೀಚೆಗೆ 'ಜೇಡರಹಳ್ಳಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಫಿಲಂ ಚೇಂಬರ್ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಸಾ ರಾ ಗೋವಿಂದು ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸತ್ಯ ಮಾತನಾಡುತ್ತಾ, ಕೃಷ್ಣಪ್ಪ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಜೇಡರಹಳ್ಳಿ.

ಈ ಚಿತ್ರದಲ್ಲಿ ಅವರು ತುಂಬಾ ಅನುಭವಿ ಕಲಾವಿದನಂತೆ ಅಭಿನಯಿಸಿದ್ದಾರೆ. 'ಜೇಡರಹಳ್ಳಿ' ಚಿತ್ರೀಕರಣವನ್ನು 55 ದಿನಗಳಲ್ಲಿ ಮುಗಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ಕೃಷ್ಣಪ್ಪನವರ ಸಹಕಾರದಿಂದ ಕೇವಲ 35 ದಿನಗಳಲ್ಲಿ ಚಿತ್ರೀಕರಣ ಮುಗಿಸಿದೆವು ಎಂದು ಹೆಮ್ಮೆಯಿಂದ ಹೇಳಿದರು.

ಚಿತ್ರದ ನಾಯಕ ನಟ ಕೃಷ್ಣಪ್ಪ ಮಾತನಾಡುತ್ತಾ, ಈ ಚಿತ್ರದ ಮೂಲಕ ನಾನು ಸಮಾಜಕ್ಕೆ ಒಂದು ಮುಖ್ಯವಾದ ಸಂದೇಶವನ್ನು ನೀಡುತ್ತಿದ್ದೇನೆ. ಈ ಚಿತ್ರ ನೋಡಿದ ಕೆಲವರಾದರೂ ಹಿಂಸೆಯನ್ನು ತ್ಯಜಿಸಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ಕೃಷ್ಣಪ್ಪನಿಗೆ ಜತೆಯಾಗಿ ಶ್ವೇತಾ, ಧಾಮ ಅಭಿನಯಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Former Bangalore under world don now the social servant H Krishnamurthy alias Jedarahalli Krishnappa's Kannada movie 'Jedarahalli' is ready for release. The story of the film is revolves around Jedarahalli Krishnappa's underworld days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X