»   » ವಿಷ್ಣುವರ್ಧನ ಚಿತ್ರಕ್ಕೆ ಬ್ಯಾಕ್ ಬೋನ್ 'ಹ್ಯಾಂಡ್ ಫೋನ್'

ವಿಷ್ಣುವರ್ಧನ ಚಿತ್ರಕ್ಕೆ ಬ್ಯಾಕ್ ಬೋನ್ 'ಹ್ಯಾಂಡ್ ಫೋನ್'

Posted By: * ಶ್ರೀರಾಮ್ ಭಟ್
Subscribe to Filmibeat Kannada

ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ 'ವಿಷ್ಣುವರ್ಧನ' ಚಿತ್ರ ರೀಮೇಕಾ ಅಥವಾ ಸ್ವಮೇಕಾ ಎಂಬ ಚರ್ಚೆ ಕೂಡ ರಾಜ್ಯಾದ್ಯಂತ ನಡೆದಿದೆ. ಕೇವಲ ಪ್ರೇಕ್ಷಕರ ವಲಯದಲ್ಲಿ ಅಲ್ಲದೇ ಪತ್ರಕರ್ತರ ವಲಯದಲ್ಲೂ ದೊಡ್ಡ ಕುತೂಹಲವನ್ನು ಕೆರಳಿಸಿರುವ ಈ ಚಿತ್ರ ತೆಲುಗಿನ 'ನಿನ್ನ ನೇಡು ರೇಪು' ಚಿತ್ರದಿಂದ ಸ್ಪೂರ್ತಿ ಪಡೆಯಲಾಗಿದೆ ಎನ್ನಲಾಗಿತ್ತು.

ಆದರೆ ವಿಷ್ಣುವರ್ಧನ ಚಿತ್ರಕ್ಕೆ ನಿಜವಾದ ಸ್ಪೂರ್ತಿ ಇದ್ಯಾವುದೂ ಅಲ್ಲ, 2009 ರಲ್ಲಿ ಬಿಡುಗಡೆಯಾಗಿದ್ದ ಕೋರಿಯನ್ ಚಿತ್ರ 'ಹ್ಯಾಂಡ್ ಫೋನ್. ಕನ್ನಡದ ವಿಷ್ಣುವರ್ಧನ, ಈ ಕೋರಿಯನ್ ಚಿತ್ರದ ಸಂಪೂರ್ಣ ರೀಮೇಕ್ ಅಲ್ಲದಿದ್ದರೂ, ಅದರ 'ಮ್ಯಾಗ್ಸಿಮಮ್ ಅಡಾಪ್ಷನ್'. ಪಕ್ಕಾ ಅದನ್ನೇ ಆಧಾರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ.  ಈ ಕೋರಿಯನ್ ಚಿತ್ರ ಕೂಡ ಸಾಕಷ್ಟು ಖ್ಯಾತವಾಗಿತ್ತು. ಅದು, ಕ್ಲಾಸ್ ಹಾಗೂ ಮಾಸ್ ಎಲ್ಲಾ ವರ್ಗದ ಜನರು ಇಷ್ಟಪಟ್ಟ ಸಿನಿಮಾ.

ಎಲ್ಲರೂ ಯಾವುದಾದರೊಂದು ಕಥೆ, ಘಟನೆಯಿಂದ ಸ್ಫೂರ್ತಿ ಅಥವಾ ಪ್ರೇರಣೆ ಪಡೆದೇ ಇರುತ್ತಾರೆ. ಕೆಲವರು ಅದನ್ನು ಹೇಳಿಕೊಳ್ಳತ್ತಾರೆ. ಆದರೆ ದ್ವಾರಕೀಶ್ ಈ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೂ, ಹ್ಯಾಂಡ್ ಫೋನ್ ನಿಂದ ಸ್ಪೂರ್ತಿ ಪಡೆದು ನಿರ್ಮಿಸಿರುವ ಈ 'ವಿಷ್ಣುವರ್ಧನ' ಚಿತ್ರ ಚೆನ್ನಾಗಿದೆ. ಅಂದುಕೊಂಡಿರುವಂತೆ ಒಳ್ಳೆಯ ರೆಸ್ಪಾನ್ಸ್ ಗಳಿಸಿದೆ. (ಒನ್ ಇಂಡಿಯಾ ಕನ್ನಡ)

English summary
Kannada movie Vishnuvardhana is not a Remake, But, Adaptation of Korean movie 'Hand Phone'. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada