ಮುರಳಿಗೆ ಅಂತಿಮ ನಮನ; ಕಂಬನಿಗರೆದ ಚಿತ್ರರಂಗ

By Rajendra

ಬರಸಿಡಿಲಿನಂತೆ ಬಂದೆರಗಿದ ಬಹುಭಾಷಾ ನಟ ಮುರಳಿ ಅವರ ಸಾವಿನ ನೋವಿನಿಂದ ತಮಿಳು ಚಿತ್ರರಂಗ ಇನ್ನೂ ಹೊರಬಂದಿಲ್ಲ. ಇಂದು ಚೆನ್ನೈನಲ್ಲಿ ಅವರ ಅಂತಿಮ ಯಾತ್ರೆ ನೆರವೇರಿತು. ಸಾವಿರಾರು ಸಂಖ್ಯೆಯ ಅಭಿಮಾನಿಗಳು, ತಮಿಳು ಚಿತ್ರರಂಗದ ಗಣ್ಯರು ಮುರಳಿಗೆ ಅಂತಿಮ ನಮನ ಸಲ್ಲಿಸಿದರು.

ಮುರಳಿ ಅವರ ಹಠಾತ್ ನಿಧನಕ್ಕೆ ಸಂತಾಪ ಸೂಚಿಸಿ ದತಮಿಳು ಚಿತ್ರರಂಗ ಇಂದು ಸಾಂಕೇತಿಕ ಬಂದ್ ಆಚರಿಸಿ ಗೌರವ ಸೂಚಿಸಿತು. ನಟ ಮುರಳಿ ಅವರು ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಆಗಿದ್ದರು.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುರಳಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರ ಕುಟುಂಬಿಕರನ್ನು ಸಂತೈಸಿದರು. ತಮಿಳಿನ ಬಹುತೇಕ ನಟರು ಮುರಳಿ ಅವರ ಅಂತ್ಯಕ್ರಿಯೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನಲ್ಲಿರುವ ಮುರಳಿ ಅವರ ಬಂಧು ಮಿತ್ರರು ಇಂದು ಚೆನ್ನೈಗೆ ತೆರಳಿದರು.

ಮುರಳಿ ಅವರು ಶ್ವಾನ ಪ್ರಿಯರಾಗಿದ್ದರು. ಅವರಿಗೆ ಶ್ವಾನಗಳೆಂದರೆ ಬಲು ಅಚ್ಚುಮೆಚ್ಚು. ಚೆನ್ನೈನ ಅವರ ಮನೆಯಲ್ಲಿ ಹತ್ತು ಶ್ವಾನಗಳನ್ನು ಅವರು ಪೋಷಿಸುತ್ತಿದ್ದರು ಎಂದರೆ ನೀವೇ ಊಹಿಸಿ ಅವರು ಪ್ರಾಣಿಗಳೆಂದರೆ ಎಷ್ಟು ಪ್ರೀತಿ ಎಂಬುದನ್ನು. ಅವರ ಮುಖಚಹರೆ ತಮಿಳು ಚಿತ್ರಗಳಿಗೆ ಹೇಳಿ ಮಾಡಿಸಿದಂತಿತ್ತು ಎಂದು ಅವರ ಜೊತೆ ನಟಿಸಿರುವ ಎಸ್ ವಿ ಶೇಖರ್ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X