For Quick Alerts
  ALLOW NOTIFICATIONS  
  For Daily Alerts

  ರಂಜಿತಾ ಪಾತ್ರ ಮಾಡ್ತಾರಂತೆ ದುಂಡು ಮಲ್ಲಿಗೆ ನಮಿತಾ!

  By Rajendra
  |

  ಸ್ವಾಮಿ ನಿತ್ಯಾನಂದ ಕುರಿತ ವಿವಾದಾತ್ಮಕ ಚಿತ್ರವನ್ನು ಮದನ್ ಪಟೇಲ್ ಕೈಗೆತ್ತಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರಕ್ಕೆ ಅವರು 'ಸತ್ಯಾನಂದ' ಎಂದು ಹೆಸರಿಟ್ಟಿದ್ದಾರೆ. ಸ್ವಾಮಿ ನಿತ್ಯಾನಂದ ನೈಜಕತೆ ಎಂದ ಮೇಲೆ ರಂಜಿತಾ ಇರದಿದ್ದರೆ ಹೇಗೆ. ಈ ಪಾತ್ರಕ್ಕಾಗಿ ಸ್ವತಃ ರಂಜಿತಾ ಅವರನ್ನೇ ಮದನ್ ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದರು.

  ಕಡೆಗೆ ರಂಜಿತಾ ಪಾತ್ರವನ್ನು ಪೋಷಿಸಲು ಸೆಕ್ಸಿ ತಾರೆ ನಮಿತಾರನ್ನು ಆಹ್ವಾನಿಸಿದ್ದಾರೆ. ಆದರೆ ನಮಿತಾ ಈ ಪಾತ್ರಕ್ಕೆ ಜೀವ ತುಂಬಲು ಊ ಅಂದಿದ್ದಾರೋ ಊಹುಂ ಅಂದಿದ್ದಾರೋ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಆಕೆಯನ್ನು ಕರೆತರುವ ಎಲ್ಲ ಸಿದ್ಧತೆಗಳನ್ನು ಮದನ್ ಮಾಡುತ್ತಿದ್ದಾರೆ. ನಮಿತಾ ಸಿಗದಿದ್ದರೆ ಚಾರ್ಮಿ ಕೌರ್ ಅವರನ್ನು ಕರೆತರುವುದಾಗಿ ಮದನ್ ಹೇಳಿದ್ದಾರೆ.ಆದರೆ ಇನ್ನೂ ಯಾರು ಎಂಬುದು ಕನ್ಫರ್ಮ್ ಆಗಿಲ್ಲ.

  ಅಂದಹಾಗೆ ನಿತ್ಯಾನಂದನ ಪಾತ್ರವನ್ನು ರವಿ ಚೇತನ್ ಎಂಬುವವರು ಪೋಷಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮಹಾರಾಣಿ ಕಾಲೇಜು ಮುಂದಿನ ಫ್ರೀಡಂ ಪಾರ್ಕಿನಲ್ಲಿ ಭರದಿಂದ ಸಾಗಿದೆ. 'ಕೋಟಿಗೊಬ್ಬ' ಚಿತ್ರದ ಮೂಲಕ ರವಿ ಚೇತನ್ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಬಳಿಕ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದರು. ಇದೊಂದು ಚತುರ್ಭಾಷಾ ಚಿತ್ರ ಎನ್ನುತ್ತಾರೆ ಮದನ್.

  English summary
  Southern sex-siren Namitha to play a role of actress Ranjitha in the movie Sathyananda. Ravi Chetan is playing the hero character. The veteran Doddanna is doing an important role in the film. The movie is based on true life of Swami Nityananda produced by Madan Patel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X