ಯಕ್ಷನಿಗೆ ನಾನಾ ಪಾಟೇಕರ್ ಕನ್ನಡ ಡಬ್ಬಿಂಗ್
ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ 'ಯಕ್ಷ' ಚಿತ್ರಕ್ಕೆ ವಿಜಯ ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದೆ. ಬಾಲಿವುಡ್ ನಟರಾದ ನಾನಾಪಟೇಕರ್ ಮತ್ತು ಅತುಲ್‌ಕುಲಕರ್ಣಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಅವರೇ ಕಂಠದಾನ ಮಾಡಿರುವುದು ಚಿತ್ರದ ವಿಶೇಷ.
ಖ್ಯಾತ ನಟಿ ಶರಣ್ಯ ಅವರು ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಡಬ್ಬಿಂಗ್‌ನಲ್ಲಿ ಭಾಗವಹಿಸಿದ್ದರು. ಅನ್ಯ ಭಾಷೆಯ ಕಲಾವಿದರೆಲ್ಲಾ ಕನ್ನಡ ತಿಳಿದು ತಮ್ಮ ಪಾತ್ರಕ್ಕೆ ಕಂಠದಾನ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎನ್ನುತ್ತಾರೆ ನಿರ್ಮಾಪಕ ಸಿದ್ದರಾಜು.
ರಮೇಶ್ ಭಾಗವತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನುಪ್‌ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಕಲೈ, ಇಮ್ರಾನ್, ಹರ್ಷ ನೃತ್ಯ, ರವಿವರ್ಮ, ಮಾಸ್‌ಮಾದ ಸಾಹಸ, ಮಂಜುಮಾಂಡವ್ಯ ಸಂಭಾಷಣೆ ಮತ್ತು ಮಧುಗಿರಿಪ್ರಕಾಶ್ ಅವರ ನಿರ್ಮಾಣನಿರ್ವಹಣೆಯಿದೆ.
ಚಿತ್ರದ ತಾರಾಬಳಗದಲ್ಲಿ ಯೋಗೀಶ್, ರೂಬಿ, ನಾನಾಪಾಟೇಕರ್, ಅತುಲ್‌ಕುಲಕರ್ಣಿ, ಶರಣ್ಯ, ಮಾಸ್ಟರ್ ಹಿರಣ್ಣಯ್ಯ, ಕೋಮಲ್, ಮಹೇಶ್, ಗಿರೀಶ್‌ಮಟ್ಟಣ್ಣನವರ್, ಶರಣ್, ಅಂಬುಜಾಕ್ಷಿ ಮುಂತಾದವರಿದ್ದಾರೆ. ಶ್ಯಾಮಿ ಅಸೋಸೆಟ್ಸ್ ಲಾಂಛನದಲ್ಲಿ ಟಿ ಪಿ ಸಿದ್ಧರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ.


Click it and Unblock the Notifications











