ಸೂಪರ್ ಮ್ಯಾನ್ ಆಗಿ ಪ್ರಜ್ವಲ್ ದೇವರಾಜ್

ಹಾಲಿವುಡ್ ನ ಸೂಪರ್ ಮ್ಯಾನ್ ಗೂ ನಮ್ಮ ಸೂಪರ್ ಮ್ಯಾನ್ ಚಿತ್ರಕ್ಕೂ ಯಾವುದೇ ಸಂಬಂಧ ವಿಲ್ಲ ಎಂದು ಪ್ರಜ್ವಲ್ ಸ್ಪಷ್ಟಪಡಿಸಿದರು. ನಾಯಕಿ ಪಾತ್ರವನ್ನು ಮೊಗ್ಗಿನ ಮನಸು ಚಿತ್ರದಲ್ಲಿ ನಟಿಸಿ ರಾಧಿಕಾ ಪಂಡಿತ್ ಪೋಷಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪ್ರಭಾಕರ್ ಈ ಚಿತ್ರವನ್ನು ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಅವರಿಗೂ 10 ವರ್ಷಗಳ ಒಡನಾಟ.
ಎಂಟು ಹಾಡುಗಳನ್ನು ಒಳಗೊಂಡಿರುವ ಸೂಪರ್ ಮ್ಯಾನ್ ಚಿತ್ರಕ್ಕೆ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ...' ಖ್ಯಾತಿಯ ರಘು ದೀಕ್ಷಿತ್ ಸಂಗೀತ ಸಂಯೋಜನೆ ಇದೆ. ಈ ಚಿತ್ರಕ್ಕೆ ಹೈ ಪಿಚ್ ನಲ್ಲಿ ನಾನು ಹಾಡುಗಳನ್ನು ಹಾಡಿಲ್ಲ ಎನ್ನುತ್ತಾರೆ ರಘು ದೀಕ್ಷಿತ್. ಚಿತ್ರದ ಐದು ಹಾಡುಗಳಿಗೆ ರಾಘವೇಂದ್ರ ಕಾಮತ್ ಸಾಹಿತ್ಯ ಸಿಂಚನವಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್
ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!


Click it and Unblock the Notifications