For Quick Alerts
  ALLOW NOTIFICATIONS  
  For Daily Alerts

  ಸೆಕ್ಸಿ ಲುಕ್‌ನಲ್ಲಿ ಬಳುಕುವ ಬಳ್ಳಿ ರಾಗಿಣಿ ದ್ವಿವೇದಿ

  By Rajendra
  |

  ವೀರ ಮದಕರಿ, ಗಂಡೆದೆ, ಕೆಂಪೇಗೌಡ ನಾಯಕಿ ರಾಗಿಣಿ ದ್ವಿವೇದಿ ಈಗ ಸೆಕ್ಸಿ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಆಕೆ ಅಭಿನಯಿಸುತ್ತಿರುವ 'ಟಿಪ್ಪು' ಚಿತ್ರದಲ್ಲಿ ಹಿಂದೆಂದಿಗಿಂತಲೂ ಹಾಟ್ ಮತ್ತು ಸ್ಪೈಸಿಯಾಗಿ ಕಾಣಿಸಲಿದ್ದಾರಂತೆ. ವಿಶೇಷ ಎಂದರೆ ಈಕೆಯ ಸೆಕ್ಸಿ ಲುಕ್‌ಗೆ ಕಾರಣರಾದವರು ಈಕೆಯ ಸಹೋದರ.

  ಈತ ಸಿಂಗಪುರದಲ್ಲಿ ಡಿಸೈನಿಂಗ್ ಕೋರ್ಸ್ ಮಾಡಿದ್ದು, ತಾನು ವಿನ್ಯಾಸಗೊಳಿಸಿದ ವಸ್ತ್ರಗಳನ್ನು ರಾಗಿಣಿ ಮೇಲೆ ಪ್ರಯೋಗಿಸಿದ್ದಾನೆ. ಅದು ವರ್ಕ್‌ಔಟ್ ಕೂಡ ಆಗಿದೆ. ಈ ಚಿತ್ರದ ನಾಯಕ ನಟ ಆದಿತ್ಯ. ಆಕ್ಷನ್, ಕಟ್ ಹೇಳುತ್ತಿರುವವರು ಎಂ ಎಸ್ ರಮೇಶ್.

  ಸದ್ಯಕ್ಕೆ ಟಿಪ್ಪು ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಚಿತ್ರಕ್ಕಾಗಿ ವಿ.ಮನೋಹರ್ ಬರೆದಿರುವ 'ಬಿಟ್ಟು ಹೋದೋರೆಲ್ಲಾ ದಿಕ್ಕೆಟ್ಟು ನಿಂತೊವ್ರೆ' ಎಂದು ಆರಂಭವಾಗುವ ಹಾಡಿನ ಚಿತ್ರೀಕರಣ ಇತ್ತೀಚೆಗೆ ಮೈಸೂರಿನಲ್ಲಿ ನಡೆಯಿತು. ಆದಿತ್ಯ, ರಂಗಾಯಣರಘು, ಸಿಮ್ರಾನ್, ಕಮಲ ಹಾಗೂ ಶೊಭರಾಜ್ ಅಭಿನಯಿಸಿದ ಈ ಗೀತೆಗೆ ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ ಮಾಡಿದ್ದಾರೆ.

  ರಂಗಾಯಣ ರಘು, ಶೋಭರಾಜ್, ಮಾಲತಿ ಸರ್ ದೇಶಪಾಂಡೆ, ಸಿಮ್ರಾನ್, ಕಮಲ, ಅವಿನಾಶ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ದಾಸರಿಸೀನು ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ರಾಂಶೆಟ್ಟಿ ಸಾಹಸ ನಿರ್ದೇಶನ ಹಾಗೂ ಸೋಮಶೇಖರ್ ಮತ್ತು ಗಗನಮೂರ್ತಿ ನಿರ್ಮಾಣ ನಿರ್ವಹಣೆ 'ಟಿಪ್ಪು ಚಿತ್ರಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Kannada ActressRagini Dwivedi is all set to up her glamour quotient. All this is happening for her new movie Tippu and it is heard that she would be looking very hot. Ragini is pairing up with Aditya in the lead. The movie is being directed by M S Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X