ಕಾಮಿನೇನಿ ಜೊತೆ ರಾಮ್ ಚರಣ್ ಉಪಾಸನೆ
ಕಾಚಿಗೂಡ ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇದೀಗ ತಾನೆ ಬಂದ ಸುದ್ದಿ. ಚಿರಂಜೀವಿ ಏಕಮಾತ್ರ ಪುತ್ರ ರಾಮ್ ಚರಣ್ ತೇಜ ಹಾಗೂ ಉಪಾಸನಾ ಕಾಮಿನೇನಿ ಹಾರ ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ. ಇಬರಿಬ್ಬರ ಎಂಗೇಜ್‌ಮೆಂಟ್ ನವೆಂಬರ್‌ನಲ್ಲಿ ನಡೆಯಲಿದೆಯಂತೆ.
ಇದಕ್ಕೆ ಪುರಾವೆ ಎಂಬಂತೆ ಇವರಿಬ್ಬರ ಕುಚುಕು ಕುಚುಕು ಫೋಟೋಗಳು ಅಂತರ್ಜಾಲದಲ್ಲಿ ಸರಿದಾಡಿವೆ. ಅಂದಹಾಗೆ ಇವರಿಬ್ಬರು ಚೆನ್ನೈನಲ್ಲಿ ಓದುತ್ತಿರಬೇಕಾದರೆ ಒಬ್ಬರಿಗೊಬ್ಬರು ಜೊತೆಯಾಗಿ ಹಿತವಾಗಿ ಸುತ್ತಾಡಿದ್ದರಂತೆ. ಅಂದು ನೆಟ್ಟಿದ ಪ್ರೇಮದ ಬೀಜ ಇಂದು ಮೊಳಕೆಯೊಡೆದು ಫಲ ನೀಡಲು ಸಿದ್ಧವಾಗಿದೆ.
ಉಪಾಸನಾ ಕಾಮಿನೇನಿಗೆ ಚಿತ್ರರಂಗದ ಹಿನ್ನೆಲೆ ಇಲ್ಲದಿದ್ದರೂ ಔದ್ಯಮಿಕ ಹಿನ್ನೆಲೆಯಿದೆ. ಅಪೊಲೋ ಫಿಲಾಂತ್ರೋಪಿಯ ಉಪಾಧ್ಯಕ್ಷೆ ಹಾಗೂ ಅಪೊಲೊ ಲೈಫ್ ಮತ್ತು ಎಡಿಟರ್ ಬಿ ಪಾಸಿಟೀವ್ ಮ್ಯಾಗಜಿನ್ ಕಾರ್ಯಕಾರಿ ನಿರ್ದೇಶಕಿ. ಇದೆಲ್ಲಕ್ಕಿಂತ ಹೆಚ್ಚಾಗಿ ಈಕೆ ಪ್ರಾಣಿ ಪ್ರಿಯೆ. (ಏಜೆನ್ಸೀಸ್)
More from Filmibeat
English summary
We have recently reported that Ram Charan Teja-Upasana Kamineni are getting engaged this November. The audience, who read the news, were very curious to see the couple together and know more about the bride.


Click it and Unblock the Notifications











