ಕನ್ನಡ ಶಾಲೆಗಳನ್ನು ಮುಚ್ಚಲಿ ಬಿಡಿ ಎಂದ ಅಂಬರೀಷ್

"ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಪೋಷಕರೇ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸಲು ತಯಾರಿಲ್ಲ ಎಂದ ಮೇಲೆ ಅಂತಹ ಶಾಲೆಗಳ ಅವಶ್ಯಕತೆಯಾದರೂ ಏಕೆ? ಮುಚ್ಚಲಿ ಬಿಡಿ" ಎಂದು ವಿಷಾದದಿಂದ ಗುಡುಗಿದ್ದಾರೆ ಮಂಡ್ಯದ ಗಂಡು ಅಂಬರೀಷ್.

'ಬಿಸಿಯೂಟ'ದಂತಹ ಮಹತ್ವದ ಯೋಜನೆಗಳು ಕೂಡ ಮಕ್ಕಳನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ಕಡೆ ಸೆಳೆಯಲು ವಿಫಲವಾಗಿವೆ ಎಂದ ಮೇಲೆ ಕನ್ನಡ ಶಾಲೆಗಳನ್ನು ಮುಚ್ಚುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ ಅಂಬಿ. ಈ ಮಾತನ್ನು ಅವರು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 'ಬೆಳ್ಳಿಹೆಜ್ಜೆ' ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದರ್ಭದಲ್ಲಿ ಹೇಳಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಸೇರಿಸಲು ಒಪ್ಪುತ್ತಿಲ್ಲ ಎಂದ ಮೇಲೆ ಸರ್ಕಾರಿ ಶಾಲೆಗಳನ್ನು ಮುಚ್ಚಲಿ ಎಂಬ ಅಂಬರೀಷ್ ಮಾತು ಈಗ ಸಾಕಷ್ಟು ಚರ್ಚೆಗೆ ವಿಷಯವಾಗಿದೆ. ಅದನ್ನು ಒಪ್ಪದ ಕೆಲವರು ಅಂಬಿಯಣ್ಣನ ಮಾತನ್ನು ಟೀಕಿಸುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಸೂಕ್ತ ಚರ್ಚೆಯಾಗಬೇಕು ಎಂಬ ಮಾತನ್ನು ಸ್ವತಃ ಅಂಬರೀಷ್ ಕೂಡ ಒಪ್ಪುತ್ತಾರೆ. ಆದರೆ ಯಾರು, ಯಾವಾಗ ಆ ಕೆಲಸ ಮಾಡುತ್ತಾರೆ ಎಂಬುದೀಗ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)

English summary
Rebel Star Ambarish suggests to close Kannada Medium School in Bellehejje Talk
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X