ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಯಶ್

By * ಶ್ರೀರಾಮ್ ಭಟ್

ರಾಕಿಂಗ್ ಸ್ಟಾರ್ ಪಟ್ಟ ಗಿಟ್ಟಿಸಿರುವ ನಟ ಯಶ್, ನಿನ್ನೆ (ಜನವರಿ 8, 2012) ಹುಟ್ಟುಹಬ್ಬ ಆಚರಿಸಿಕೊಂಡರು. ಅದು ತುಂಬಾ ಅದ್ದೂರಿಯಾಗಿಯೇ ಇತ್ತು. ಖಾಸಗಿ ವಾಹಿನಿಯೊಂದರ ಸಿಬ್ಬಂದಿ ಜೊತೆ ಯಶ್ ಆಚರಿಸಿಕೊಂಡ ಹುಟ್ಟುಹಬ್ಬವನ್ನು ಟಿವಿಯಲ್ಲಿ ಲಕ್ಷಾಂತರ ಜನ ನೋಡಿ ಸಂಭ್ರಮಿಸಿದರು. ನಟ ಯಶ್ ತಾನೊಬ್ಬ ಒಳ್ಳೆಯ ನಟ ಹಾಗೂ 'ಭವಿಷ್ಯದ ಸ್ಟಾರ್' ಎಂಬುದನ್ನು ಅತ್ಯಲ್ಪ ಕಾಲದಲ್ಲಿಯೇ ಸಾಬೀತು ಮಾಡಿದ್ದಾರೆ.

ಹುಟ್ಟುಹಬ್ಬದ ಹಿಂದಿನ ದಿನ ರಾತ್ರಿಯಿಂದಲೇ ಅಭಿಮಾನಿಗಳು ಯಶ್ ಮನೆ ಮುಂದೆ ಜಮಾಯಿಸತೊಡಗಿದ್ದರು. ಅಭಿಮಾನಿಗಳ ಅಭಿಮಾನ ಕಂಡು ಯಶ್ ಮೂಕವಿಸ್ಮಿತರಾದರು. ರಾತ್ರಿಯವರೆಗೂ ಮನೆಯ ಮುಂದೆ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಲು ಜನಸಾಗರ ಹರಿದು ಬರುತ್ತಲೇ ಇತ್ತು. ಯಶ್ ಎಲ್ಲರೊಂದಿಗೆ ನಗುನಗುತ್ತಾ ಬೆರೆತು ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುವುದರಲ್ಲಿ ನಿರತರಾಗಿದ್ದರು.

ಜಂಭದ ಹುಡುಗಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಯಶ್, 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ 'ಯಶ್' ಹೆಸರಿಗೆ ತಕ್ಕಂತೆ 'ಯಶ'ಸ್ವೀ ನಟ ಎನಿಸಿಕೊಂಡರು. ಅಲ್ಲಿಂದ ಮುಂದೆ ಯಶ್ ಸೋಲಿಲ್ಲದ ಸರದಾರನಾಗಿ ಯಶಸ್ಸಿನ ಪ್ರಯಣದಲ್ಲಿ ಸಾಗುತ್ತಿದ್ದಾರೆ. ರಮ್ಯಾ ಜೊತೆ 'ಲಕ್ಕಿ' ಚಿತ್ರ ಮುಗಿಸಿರುವ ಯಶ್, ಜಾನೂ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದೇ ತಿಂಗಳು 18 ರಂದು ಯಶ್ ನಟನೆಯ, ನಿರ್ದೇಶಕ ಯೋಗರಾಜ್ ಭಟ್ ಚಿತ್ರ 'ಡ್ರಾಮಾ' ಮುಹೂರ್ತ ನಡೆಯಲಿದೆ. ಈ ಮೂಲಕ ಯಶ್ ಕನ್ನಡದ ಹೆಸರಾಂತ ನಿರ್ದೇಶಕ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಡ್ರಾಮಾ ಚಿತ್ರದ ನಂತರ ಯಶ್ 'ನಾಗಶೇಖರ್' ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಟ ಯಶ್ ಅವರಿಗೆ ಇನ್ನೂ ಹೆಚ್ಚಿನ 'ಯಶಸ್ಸು' ಸಿಗಲೆಂಬುದು ಎಲ್ಲರ ಹಾರೈಕೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Rocking Star Yash celebrated Grand Birthday on 08, Jan. 2012. He acts in Yograj Bhat movie Drama. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X